ಉಳಿತಾಯ ಖಾತೆ- ಈಗ ಡಿಜಿಟಲ್ ಆಗಿ ತೆರೆಯಬಹುದು*

ಉಳಿತಾಯ ಖಾತೆ- ಈಗ ಡಿಜಿಟಲ್ ಆಗಿ ತೆರೆಯಬಹುದು*

ಒಬ್ಬ ವ್ಯಕ್ತಿ ಬ್ಯಾಂಕಿಂಗ್ ಪ್ರಯಾಣವನ್ನು ಪ್ರಾರಂಭಿಸಬೇಕಾದರೆ ಆಯ್ಕೆ ಮಾಡುವಂತಹ ಅತಿ ಸಾಮಾನ್ಯವಾದ ಖಾತೆ ಎಂದರೆ ಸೇವಿಂಗ್ಸ್ ಅಕೌಂಟ್. ಸೇವಿಂಗ್ಸ್ ಅಕೌಂಟ್ನ ಹಿಂದಿನ ಉದ್ದೇಶವೆಂದರೆ ಮಿತವ್ಯಯವಾಗಿ ಖರ್ಚುಮಾಡುವುದು ಅಥವಾ ಒಬ್ಬರ ಆದಾಯದ ಒಂದು ಭಾಗವನ್ನು ಉಳಿಸುವ ಅಭ್ಯಾಸವನ್ನು ಪ್ರೋತ್ಸಾಹಿಸುವುದು. HDFC ಬ್ಯಾಂಕಿನೊಂದಿಗೆ ಉಳಿತಾಯ ಖಾತೆಯನ್ನು ಆನ್‌ಲೈನ್‌ನಲ್ಲಿ ತರೆಯಲು ಅರ್ಜಿ ಸಲ್ಲಿಸಿ ವಿವಿಧ ವೇರಿಯಂಟುಗಳೊಂದಿಗೆ ಲಭ್ಯವಿರುವ ಹಲವಾರು ವ್ಯಾಪಕ ವೈಶಿಷ್ಟ್ಯಗಳು ಮತ್ತು ವಿಶೇಷವಾದ ಕೊಡುಗೆಗಳಿಂದ ಲಾಭವನ್ನು ಪಡೆಯಬಹುದು. ಆನ್‌ಲೈನ್‌ ಉಳಿತಾಯ ಖಾತೆಯನ್ನು ತೆರೆಯುವ ಪ್ರಕ್ರಿಯೆ ಬಹಳ ಸುಲಭ ಮತ್ತು ಸರಳ ಮತ್ತು ಕೆಲವೇ ಹಂತಗಳಲ್ಲಿ ಆನ್‌ಲೈನ್‌ನಲ್ಲಿ ಪೂರ್ತಿಗೊಳಿಸಬಹುದು.

​​​​​​​

ಈಗ ಬ್ಯಾಂಕಿಂಗ್ ಒಳಗೊಂಡಂತೆ ಬಹಳಷ್ಟು ಕ್ಷೇತ್ರಗಳಲ್ಲಿ ಡಿಜಿಟಲೀಕರಣ ಹೆಚ್ಚಾಗಿರುವುದರಿಂದ ಒಬ್ಬ ಖಾತೆದಾರನು ನೆಟ್ ಬ್ಯಾಂಕಿಂಗ್ ಅಥವಾ ಮೊಬೈಲ್ ಆ್ಯಪ್ ಮೂಲಕ 24X7 ಉಳಿತಾಯ ಖಾತೆಯನ್ನು ಬಳಸುವ ಅವಕಾಶವನ್ನು ಹೊಂದಿರುತ್ತಾನೆ, ಇದರೊಂದಿಗೆ HDFC ಬ್ಯಾಂಕ್ ವ್ಯಾಪಕ ಶಾಖೆಗಳ ಜಾಲ ಮತ್ತು ಎಟಿಎಂಗಳನ್ನು ಹೊಂದಿದೆ. ನೀವು ಡೆಬಿಟ್ ಕಾರ್ಡುಗಳ ಮೇಲೆ ವಿಶೇಷವಾದ ಡೀಲ್ಗಳು ಮತ್ತು ಕೊಡುಗೆಗಳನ್ನು ಕೂಡ ಪಡೆಯುವಿರಿ, ಇವೆಂದರೆ ಜೀವನಶೈಲಿ ಮತ್ತು ಆರೋಗ್ಯ ರಕ್ಷಣೆಯ ಪ್ರಯೋಜನಗಳು. HDFC ಬ್ಯಾಂಕ್ ಸೇವಿಂಗ್ಸ್ ಅಕೌಂಟ್ನ ಕೆಲವು ವೇರಿಯಂಟ್ಗಳು ಎಟಿಎಂಗಳಲ್ಲಿ ಅನಿಯಮಿತ ಕ್ಯಾಷ್ ವಿತ್ ಡ್ರಾವಲ್ ಮತ್ತು ಶೂನ್ಯ ಬಾಕಿ ನಿರ್ವಹಣೆ ಅಗತ್ಯತೆಯಂತಹ ವೈಶಿಷ್ಟ್ಯಗಳನ್ನು ಸಹ ನೀಡುತ್ತವೆ, ಇದರಿಂದ ಉಳಿತಾಯ ಖಾತೆಯನ್ನು ತೆರೆಯಲು ಮತ್ತಷ್ಟು ಕೋರಿಕೆಗಳು ಹೆಚ್ಚಾಗುತ್ತವೆ.

ಹಾಗಾದರೆ ಏಕೆ ಇನ್ನೂ ತಡ ಮಾಡುವಿರಿ? ನೀವು HDFC ಬ್ಯಾಂಕ್ ನಲ್ಲಿ ಸೇವಿಂಗ್ಸ್ ಅಕೌಂಟ್ನ್ನು ತೆರೆಯಲು ಹಾಗೂ ನಿಮ್ಮ ಉಳಿತಾಯದ ಪ್ರಯಾಣವನ್ನು ಪ್ರಾರಂಭಿಸಲು ಇದು ಒಳ್ಳೆಯ ಸಮಯ.

*ರೆಗ್ಯುಲರ್ ಸೇವಿಂಗ್ಸ್ (ನಿಯಮಿತ ಉಳಿತಾಯ), ಮಹಿಳಾ ಸೇವಿಂಗ್ಸ್ ಮ್ಯಾಕ್ಸ್, ಹಿರಿಯ ನಾಗರಿಕರು ಮತ್ತು ಡಿಜಿಸೇವ್ ಯೂಥ್ ಖಾತೆಗಳನ್ನು ಡಿಜಿಟಲ್ ಆಗಿ ತೆರೆಯಬಹುದು.

ಈಗ ನೀವು ನಿಮ್ಮ ಆಯ್ಕೆಗೆ ತಕ್ಕಂತೆ ತಕ್ಷಣ ಸೇವಿಂಗ್ಸ್ ಅಕೌಂಟ್ನ್ನು ತೆರೆಯಬಹುದು!

 • ಮಹಿಳೆಯರು, ಹಿರಿಯ ನಾಗರಿಕರು, ಯುವ ಮತ್ತು ಪ್ರೀಮಿಯಂ ಗ್ರಾಹಕರಿಗೆ ವಿಶೇಷವಾದ ಖಾತೆಗಳು
 • ವೀಡಿಯೋ ಕೆವೈಸಿಯೊಂದಿಗೆ ತ್ವರಿತ, ಡಿಜಿಟಲ್ ಮತ್ತು ಕಾಗದರಹಿತ ಖಾತೆ ತೆರೆಯುವಿಕೆಯನ್ನು ಆನಂದಿಸಿ.
 • ನಿಮ್ಮ ಡೆಬಿಟ್/ಎಟಿಎಂ ಕಾರ್ಡ್, ಸ್ಮಾರ್ಟ್  ಬೈ ಮತ್ತು ಪೆಯ್ಜ್ಅಪ್ ನೊಂದಿಗೆ ಮಾಸಿಕ ಆದಾಯ

ಬೇಸಿಕ್ ಸೇವಿಂಗ್ಸ್ ಬ್ಯಾಂಕ್ ಡೆಪಾಸಿಟ್ ಅಕೌಂಟ್

 • ಜೀರೋ ಬ್ಯಾಲೆನ್ಸ್ ಸೇವಿಂಗ್ಸ್ ಅಕೌಂಟ್ ನ್ನು ಆನಂದಿಸಿ
 • ನಿಮ್ಮ ಖಾತೆಯನ್ನು ಆಕ್ಸೆಸ್ ಮಾಡಲು ಉಚಿತ ರುಪೇ ಕಾರ್ಡನ್ನು ಪಡೆಯಿರಿ
 • ತಿಂಗಳಿಗೆ ಶಾಖೆಯಲ್ಲಿ 4 ಉಚಿತ ಕ್ಯಾಷ್ ವಿತ್ ಡ್ರಾವಲ್ಗಳನ್ನು ಪಡೆಯಿರಿ

ಬೇಸಿಕ್ ಸೇವಿಂಗ್ಸ್ ಬ್ಯಾಂಕ್ ಡೆಪಾಸಿಟ್ ಅಕೌಂಟ್ (BSBDA) ಸ್ಮಾಲ್ ಅಕೌಂಟ್

 • ಜೀರೋ-ಡೆಪಾಸಿಟ್, ಜೀರೋ ಬ್ಯಾಲೆನ್ಸ್ ಅಕೌಂಟ್ ನ್ನು ಆನಂದಿಸಿ
 • ನಿಮ್ಮ ಖಾತೆಯನ್ನು ಆಕ್ಸೆಸ್ ಮಾಡಲು ಉಚಿತ ರುಪೇ ಕಾರ್ಡನ್ನು ಪಡೆಯಿರಿ
 • ಎಟಿಎಂಗಳಲ್ಲಿ ತಿಂಗಳಿಗೆ 4 ಉಚಿತ ವಿತ್ ಡ್ರಾವಲ್ಗಳನ್ನು ಪಡೆಯಿರಿ

ಕೃಷಿಕರ ಉಳಿತಾಯ ಖಾತೆ (ಸೇವಿಂಗ್ ಫಾರ್ಮರ್ಸ್ ಅಕೌಂಟ್)

 • ನಿಮ್ಮ ಖಾತೆಯನ್ನು ಆಕ್ಸೆಸ್ ಮಾಡಲು ಉಚಿತ ಎಟಿಎಂ ಕಾರ್ಡನ್ನು ಪಡೆಯಿರಿ
 • HDFC ಬ್ಯಾಂಕ್ ಎಟಿಎಂಗಳಲ್ಲಿ 5 ಉಚಿತ ವಹಿವಾಟುಗಳನ್ನು ಆನಂದಿಸಿ
 • ಉಚಿತ ಬಿಲ್ ಪೇ ಸೌಲಭ್ಯದೊಂದಿಗೆ ಸುಲಭ ಪಾವತಿ ಆಯ್ಕೆಯನ್ನು ಪಡೆಯಿರಿ ತಕ್ಷಣ ತೆರೆಯಿರಿ

ಗವರ್ನಮೆಂಟ್ ಸ್ಕೀಮ್ ಬೆನಿಷಿಷಿಯರಿ ಅಕೌಂಟ್

 • ನಿಮ್ಮ ಬ್ಯಾಂಕಿಂಗ್ ಅಗತ್ಯಗಳಿಗೆ ಹೊಂದುವ ಒಂದು ಪ್ರೀಮಿಯಂ ಡೆಬಿಟ್ ಕಾರ್ಡನ್ನು ಆಯ್ಕೆ ಮಾಡಿ.
 • ತಿಂಗಳಿಗೆ 10 ಲಕ್ಷ ರೂಪಾಯಿಗಳ ಅಧಿಕ ನಗದು ವಹಿವಾಟುಗಳ ಮಿತಿಯನ್ನು ಆನಂದಿಸಿ
 • ಉಚಿತ ಬಿಲ್ ಪೇ ಸೌಲಭ್ಯದೊಂದಿಗೆ  ಸುಲಭ ಪಾವತಿ ಆಯ್ಕೆಯನ್ನು ಪಡೆಯಿರಿ

ಇನ್ಸ್ಟಿಟ್ಯೂಷನಲ್ ಸೇವಿಂಗ್ಸ್ ಅಕೌಂಟ್

 • ನಗದು ನಿರ್ವಹಣಾ ಸೇವೆಗಳ ಮೂಲಕ ದಾನ ಮತ್ತು ಶುಲ್ಕಗಳನ್ನು ನಿರ್ವಹಿಸಿ
 • ಖಾತೆಯನ್ನು HDFC ಬ್ಯಾಂಕ್ ಪೇಮೆಂಟ್ ಗೇಟ್ವೇ ಈಸಿ ಕಲೆಕ್ಷನ್ ಗೆ ಲಿಂಕ್ ಮಾಡಿ
 • ಆನ್ಲೈನ್ ವಿಧಾನವನ್ನು ಬಳಸುವುದರ ಮೂಲಕ ಉದ್ಯೋಗಿಗಳು, ವ್ಯಾಪಾರಿಗಳು ಇತ್ಯಾದಿಗಳಿಗೆ ಪಾವತಿಗಳನ್ನು ಸರಳೀಕರಿಸಿ

ನಿಯಮಿತ ಉಳಿತಾಯ ಖಾತೆ (ರೆಗ್ಯುಲರ್ ಸೇವಿಂಗ್ಸ್ ಅಕೌಂಟ್)

 • ಉಚಿತ ವೈಯಕ್ತಿಕ ಚೆಕ್ ಬುಕ್ ಅನ್ನು ಪಡೆಯಿರಿ
 • ನಿಮ್ಮ ಅಗತ್ಯಗಳನ್ನು ಪೂರೈಸುವ ಅಂತರ್ ರಾಷ್ಟ್ರೀಯ ಡೆಬಿಟ್ ಕಾರ್ಡ್ ಗಳಾದ ಮಿಲೇನಿಯಾ ಡೆಬಿಟ್ ಕಾರ್ಡ್ ಅಥವಾ ರುಪೇ ಪ್ರೀಮಿಯಂ ಡೆಬಿಟ್ ಕಾರ್ಡ್ ಅನ್ನು ಆಯ್ಕೆ ಮಾಡಿ.
 • ಬಿಲ್ ಪೇ ಸೇವೆಯೊಂದಿಗೆ ನಿಮ್ಮ ಬಿಲ್ಗಳನ್ನು ಸುರಕ್ಷಿತವಾಗಿ ಮತ್ತು ಅನುಕೂಲಕರವಾಗಿ ಪಾವತಿಸಿ

ಡಿಜಿಸೇವ್ ಯೂಥ್ ಅಕೌಂಟ್

 • ನಿಮ್ಮ ಎಲ್ಲಾ ಅಗತ್ಯತೆಗಳಿಗೆ ಡಿಜಿಟಲ್ ಪ್ಲಾಟ್ಫಾರ್ಮ್ಸ್
 • ಮೊದಲ ವರ್ಷ ಉಚಿತ ಮಿಲೇನಿಯಾ ಡೆಬಿಟ್ ಕಾರ್ಡ್
 • ಎಲ್ಲಾ ವರ್ಗಗಳ ಮೇಲೆ ವರ್ಷಪೂರ್ತಿ ಕೊಡುಗೆಗಳು

ಸ್ಪೆಷಲ್ ಗೋಲ್ಡ್ ಮತ್ತು ಸ್ಪೆಷಲ್ ಪ್ಲಾಟಿನಂ

 • ಪ್ರೀಮಿಯಂ ಜೀವನಶೈಲಿಯ ಪ್ರಯೋಜನಗಳನ್ನು ಆನಂದಿಸಿ
 • ಉತ್ತಮ ಆರೋಗ್ಯರಕ್ಷಣೆ ಮತ್ತು ವಿಮಾ ಕವರೇಜ್ ಅನ್ನು ಪಡೆಯಿರಿ
 • ಲಾಕರ್ಸ್, ಡಿಮ್ಯಾಟ್ ಮತ್ತು ಟ್ರೇಡಿಂಗ್ ಖಾತೆಗಳ ಮೇಲೆ ನೀವು ಆಯ್ಕೆ ಮಾಡುವ ದರಗಳನ್ನು ಪಡೆಯಿರಿ
 • ಹೆಚ್ಚಿನ ವಹಿವಾಟು ಮಿತಿಗಳು ತಕ್ಷಣ ತೆರೆಯಿರಿ

ಕಿಡ್ಸ್ ಅಡ್ವಾಂಟೇಜ್ ಅಕೌಂಟ್

 • ಪೋಷಕರ ಸಮ್ಮತಿಯೊಂದಿಗೆ ಮಕ್ಕಳಿಗೆ ಅಂತರ ರಾಷ್ಟ್ರೀಯ ಡೆಬಿಟ್ ಕಾರ್ಡ್ ಅನ್ನು ಪಡೆಯಿರಿ
 • 1 ಲಕ್ಷ ರೂಪಾಯಿಗಳವರೆಗೆ ಶೈಕ್ಷಣಿಕ ವಿಮಾ ಕವರೇಜ್ ಅನ್ನು ಉಚಿತವಾಗಿ ಪಡೆಯಿರಿ
 • ಪ್ರತಿ ತಿಂಗಳು 1000 ರೂಪಾಯಿಗಳಷ್ಟು ಭವಿಷ್ಯ ನಿಧಿಯನ್ನು ನಿರ್ಮಿಸಿ.

ಹಿರಿಯ ನಾಗರಿಕರ ಖಾತೆ

 • ಅಪಘಾತದಿಂದ ಆಸ್ಪತ್ರೆಗೆ ದಾಖಲಾಗಿರುವುದಕ್ಕೆ ಒಂದು ವರ್ಷಕ್ಕೆ 50,000 ರೂಪಾಯಿಗಳಷ್ಟು ಮರುಪಾವತಿಯನ್ನು ಪಡೆಯಿರಿ
 • 15 ದಿನಗಳು ಆಸ್ಪತ್ರೆಯಲ್ಲಿ ದಾಖಲಾಗಿದ್ದರೆ ದಿನಕ್ಕೆ 500 ರೂಪಾಯಿಗಳಂತೆ ಪ್ರತಿನಿತ್ಯದ ನಗದು ಭತ್ಯವನ್ನು ಪಡೆಯಿರಿ
 • ಫಿಕ್ಸೆಡ್ ಡೆಪಾಸಿಟ್ (ಎಫ್ ಡಿ) ಗಳ ಮೇಲೆ ಆದ್ಯತೆಯ ದರಗಳನ್ನು ಆನಂದಿಸಿ

ಮಹಿಳಾ ಉಳಿತಾಯ ಖಾತೆ (ವುಮೆನ್ಸ್ ಸೇವಿಂಗ್ಸ್ ಅಕೌಂಟ್ )

 • ನೀವು ಖರ್ಚು ಮಾಡುವ ಎಲ್ಲಾ ಅಗತ್ಯತೆಗಳಿಗೆ ಈಸಿಶಾಪ್ ವುಮೆನ್ಸ್ ಡೆಬಿಟ್ ಕಾರ್ಡ್ ಪಡೆಯಿರಿ
 • ನೀವು ಖರ್ಚು ಮಾಡುವ ಪ್ರತಿ 200 ರೂಪಾಯಿಗಳಿಗೂ 1 ರೂಪಾಯಿಯ ಕ್ಯಾಶ್ ಬ್ಯಾಕ್ ಗಳಿಸಿ
 • ದ್ವಿ-ಚಕ್ರ ವಾಹನ ಸಾಲದ ಮೇಲೆ 2% ಕಡಿಮೆ ಬಡ್ಡಿ ದರವನ್ನು ಆನಂದಿಸಿ
FAQs

FAQs

1. ಸೇವಿಂಗ್ಸ್ ಅಕೌಂಟ್ ಎಂದರೇನು?

ಸೇವಿಂಗ್ಸ್ ಅಕೌಂಟ್ ಎಂದರೆ ತಮ್ಮ ಗಳಿಕೆಯ ಒಂದು ನಿರ್ದಿಷ್ಟ ಭಾಗವನ್ನು ಉಳಿಸಲು ಬಯಸುವ ಅನೇಕರು ಆಯ್ಕೆ ಮಾಡುವ ಠೇವಣಿ ಖಾತೆಯಾಗಿರುತ್ತದೆ. ಇದು ಒಂದು ರೀತಿಯ ಬ್ಯಾಂಕ್ ಖಾತೆಯಾಗಿದ್ದು, ಇದರಲ್ಲಿ ನೀವು ನಿಮ್ಮ ಹಣವನ್ನು ನಿಲುಗಡೆ ಮಾಡಬಹುದು, ಅದರ ಮೇಲೆ ಬಡ್ಡಿಯನ್ನು ಗಳಿಸಬಹುದು ಮತ್ತು ಯಾವುದೇ ಸಮಯದಲ್ಲಿ ಹಣವನ್ನು ಹಿಂಪಡೆಯಬಹುದು. ಇದು ಲಿಕ್ವಿಡ್ ಫಂಡ್ಗಳ ಅನುಕೂಲವನ್ನು ಒದಗಿಸುತ್ತದೆ.

2. ಸೇವಿಂಗ್ಸ್ ಅಕೌಂಟ್ ನ್ನು ಆನ್‌ಲೈನ್‌ನಲ್ಲಿ ಹೇಗೆ ತೆರೆಯಬಹುದು?

ಆನ್‌ಲೈನ್‌ನಲ್ಲಿ ಖಾತೆಯನ್ನು ತೆರೆಯುವ ಪ್ರಕ್ರಿಯೆಯು ಬಹಳ ಸರಳ ಮತ್ತು ನಿಜವಾಗಿಯೂ ಸುಲಭ. ನಿಮ್ಮ ಆನ್‌ಲೈನ್‌ ಬ್ಯಾಂಕ್ ಖಾತೆ ತೆರೆಯುವ ಪ್ರಕ್ರಿಯೆಯನ್ನು ಪ್ರಾರಂಭಿಸಲು ಇಲ್ಲಿ ಕ್ಲಿಕ್ ಮಾಡಿ, ನಿಮ್ಮ ಮನೆಯಲ್ಲೇ ಕುಳಿತು ಮಾಡಬಹುದು. HDFC ಬ್ಯಾಂಕ್ ನಲ್ಲಿ ನೀವು ವೀಡಿಯೋ ಕೆವೈಸಿ ಸೌಲಭ್ಯ(ನೋ ಯುವರ್ ಕಸ್ಟಮರ್) ವನ್ನು ಕೂಡ ಆಯ್ಕೆ ಮಾಡಬಹುದು, ಇದರಿಂದ ನೀವು ನೇರವಾಗಿ ಬ್ಯಾಂಕಿಗೆ ಹೋಗುವುದು ತಪ್ಪುತ್ತದೆ.

3. ವಿವಿಧ ರೀತಿಯ ಸೇವಿಂಗ್ಸ್ ಅಕೌಂಟ್ಗಳು ಯಾವುವು?

ಉಳಿತಾಯ ಖಾತೆಗಳು ವಿವಿಧ ರೀತಿಯಲ್ಲಿವೆ - HDFC ಬ್ಯಾಂಕ್ ಸೇವಿಂಗ್ಸ್ ಮ್ಯಾಕ್ಸ್ ಖಾತೆ, ರೆಗ್ಯುಲರ್ ಸೇವಿಂಗ್ಸ್ ಅಕೌಂಟ್, ಡಿಜಿಸೇವ್ ಯೂಥ್ ಅಕೌಂಟ್, ವಿಮೆನ್'ಸ್  ಸೇವಿಂಗ್ಸ್ ಅಕೌಂಟ್ ಮತ್ತು ಹಿರಿಯ ನಾಗರಿಕರ ಸೇವಿಂಗ್ಸ್ ಅಕೌಂಟ್ ಇತ್ಯಾದಿಗಳಲ್ಲಿ ಯಾವುದಾದರೂ ಒಂದನ್ನು ಆಯ್ಕೆ ಮಾಡಬಹುದು. ನಮ್ಮ ಗ್ರಾಹಕ ಗುಂಪುಗಳ ಅಗತ್ಯಗಳು ವಿಭಿನ್ನ ರೀತಿಯಾಗಿರುವುದರಿಂದ ಉಳಿತಾಯ ಖಾತೆ ವೇರಿಯಂಟ್ಗಳನ್ನು ವಿನ್ಯಾಸಗೊಳಿಸಲಾಗಿದೆ.

4. ಒಂದು ಸೇವಿಂಗ್ಸ್ ಅಕೌಂಟ್ ನಲ್ಲಿರಬೇಕಾದ ಕನಿಷ್ಠ ಬಾಕಿ ಮೊತ್ತ ಎಷ್ಟು?

ಕನಿಷ್ಠ ಬಾಕಿಯ ಅವಶ್ಯಕತೆ ಅಥವಾ ಸರಾಸರಿ ಮಾಸಿಕ ಬ್ಯಾಲೆನ್ಸ್ (ಎಎಂಬಿ) ಅವಶ್ಯಕತೆಯು ಗ್ರಾಹಕರು ಆಯ್ಕೆ ಮಾಡಿದ ಸೇವಿಂಗ್ಸ್ ಅಕೌಂಟ್ ಪ್ರಕಾರ ಮತ್ತು ಖಾತೆದಾರರ ಸ್ಥಳದೊಂದಿಗೆ ಬದಲಾಗುತ್ತದೆ. ಉದಾಹರಣೆಗೆ, HDFC ಬ್ಯಾಂಕ್ ರೆಗ್ಯುಲರ್ ಸೇವಿಂಗ್ಸ್ ಅಕೌಂಟ್ ತೆರೆಯಲು ಮೆಟ್ರೊ/ನಗರ ಶಾಖೆಗಳಿಗೆ ಕನಿಷ್ಠ 7500 ರೂಪಾಯಿಗಳಾದರೆ ಅರೆ ನಗರ ಶಾಖೆಗಳಿಗೆ 5,000 ರೂಪಾಯಿಗಳು ಮತ್ತು ಗ್ರಾಮೀಣ ಶಾಖೆಗಳಿಗೆ 2,500 ರೂಪಾಯಿಗಳಾಗಿರುತ್ತದೆ.

 

5. ಸೇವಿಂಗ್ಸ್ ಅಕೌಂಟ್ ಮೇಲಿನ ಬಡ್ಡಿ ದರ ಎಷ್ಟು?

ಸಾಮಾನ್ಯವಾಗಿ ಭಾರತದಲ್ಲಿನ ಬ್ಯಾಂಕುಗಳು ಸೇವಿಂಗ್ಸ್ ಅಕೌಂಟ್ ಮೇಲೆ 3.5% ರಿಂದ 7% ವರೆಗೆ ಬಡ್ಡಿಯನ್ನು ನೀಡುತ್ತವೆ. ಕೆಳಗೆ ನೀಡಲಾದ ಕೋಷ್ಟಕವನ್ನು ನೋಡಿ, HDFC ಬ್ಯಾಂಕ್ ಉಳಿತಾಯ ಖಾತೆಯ ಮೇಲಿರುವ ಬಡ್ಡಿ ದರಗಳ ಬಗ್ಗೆ ನಿಮಗೆ ತಿಳಿಯುತ್ತದೆ.

ಉಳಿತಾಯ ಬ್ಯಾಂಕ್ ಬಾಕಿ

11 ಜೂನ್, 2020 ರಿಂದ ಜಾರಿಯಲ್ಲಿರುವ ಪರಿಷ್ಕೃತ ದರ

ರೂ.50 ಲಕ್ಷ ಮತ್ತು ಹೆಚ್ಚಿಗೆ

3.50%

ರೂ.50 ಲಕ್ಷಕ್ಕಿಂತ ಕಡಿಮೆ

3.00%

ಗಮನಿಸಿ:

 • ನೀವು ಪ್ರತಿನಿತ್ಯ ನಿರ್ವಹಿಸುವ ಬಾಕಿಯನ್ನು ಆಧರಿಸಿ ಸೇವಿಂಗ್ಸ್ ಅಕೌಂಟ್   ಬಡ್ಡಿಯನ್ನು ಲೆಕ್ಕ ಮಾಡಲಾಗುವುದು
 • ಸೇವಿಂಗ್ಸ್ ಅಕೌಂಟ್  ಬಡ್ಡಿಯನ್ನು ಮೂರು ತಿಂಗಳಿಗೊಮ್ಮೆ ಪಾವತಿಸಲಾಗುವುದು

6. ಸೇವಿಂಗ್ಸ್ ಅಕೌಂಟ್ ನಿಂದ ಹಣವನ್ನು ಹೇಗೆ ವರ್ಗಾಯಿಸಬಹುದು?

ನಿಮ್ಮ ಸೇವಿಂಗ್ಸ್ ಬ್ಯಾಂಕ್ ಅಕೌಂಟ್ ನಿಂದ ಹಣವನ್ನು ವರ್ಗಾಯಿಸುವ ಒಂದೆರಡು ವಿಧಾನಗಳಿವೆ. ಮೊದಲಿಗೆ, ನೀವು ಒಂದು ಬ್ಯಾಂಕಿಂಗ್ ಮೊಬೈಲ್ ಆ್ಯಪ್ ಅನ್ನು ಬಳಸಿ ನಿಮ್ಮ ಉಳಿತಾಯ ಖಾತೆಯಿಂದ ಮತ್ತೊಬ್ಬ ವ್ಯಕ್ತಿಗೆ  ತಕ್ಷಣ ಹಣವನ್ನು ವರ್ಗಾಯಿಸಬಹುದು, ನಂತರ ನೆಟ್ ಬ್ಯಾಂಕಿಂಗ್ ಸೌಲಭ್ಯ ಕೂಡ ಇದೆಇದನ್ನು ಬಳಸಿ ಡಿಜಿಟಲ್ ವಿಧಾನದಲ್ಲಿ ಹಣವನ್ನು ತ್ವರಿತ ಮತ್ತು ಸುಲಭವಾಗಿ ವರ್ಗಾಯಿಸಬಹುದು. ನೀವು ಬ್ಯಾಂಕ್ ಶಾಖೆಗೆ ಹೋಗಿ ನಿಮ್ಮ ಬ್ಯಾಂಕ್ ಖಾತೆಯಿಂದ ಇನ್ನೊಬ್ಬ ವ್ಯಕ್ತಿಗೆ ಹಣವನ್ನು ವರ್ಗಾಯಿಸುವ ಆಯ್ಕೆ ಕೂಡ ಇದೆ.

7. ಅತ್ಯುತ್ತಮವಾದ ಸೇವಿಂಗ್ಸ್ ಬ್ಯಾಂಕ್ ಅಕೌಂಟ್ ನ್ನು ಹೇಗೆ ಆಯ್ಕೆ ಮಾಡಬಹುದು?

ನಿಮ್ಮ ವೈಯಕ್ತಿಕ ಅಗತ್ಯಗಳಿಗೆ ತಕ್ಕಂತೆ ಒಂದು ಸೇವಿಂಗ್ಸ್ ಅಕೌಂಟ್ ನ್ನು ಆಯ್ಕೆ ಮಾಡುವುದು ಬಹಳ ಮುಖ್ಯ. HDFC ಬ್ಯಾಂಕಿನಲ್ಲಿ ಗ್ರಾಹಕರಿಗೆ ಲಭ್ಯವಿರುವ ವಿವಿಧ ಉಳಿತಾಯ ಸೇವಿಂಗ್ಸ್ ಅಕೌಂಟ್ ವೇರಿಯಂಟ್ಗಳನ್ನು ಹೋಲಿಸಿ ನಿಮ್ಮ ಅಗತ್ಯತೆಗಳಿಗೆ ಹೊಂದುವ ಅತ್ಯುತ್ತಮವಾದ ಸೇವಿಂಗ್ಸ್ ಅಕೌಂಟ್ ನ್ನು ಆಯ್ಕೆ ಮಾಡಬಹುದು. ನೀವು ನೋಡಬೇಕಾದ ಮುಖ್ಯ ಅಂಶಗಳೆಂದರೆ ನೀಡಲಾಗುತ್ತಿರುವ ಬಡ್ಡಿ ದರ, ಕನಿಷ್ಠ ಮಾಸಿಕ ಬಾಕಿಯ ಅಗತ್ಯ ಮತ್ತು ನಗದು ಹಿಂಪಡೆಯುವಿಕೆಗೆ ಸಂಬಂಧಪಟ್ಟ ಅಗತ್ಯತೆಗಳು.
​​​​​​​

8. ಆನ್‌ಲೈನ್‌ನಲ್ಲಿ ಸೇವಿಂಗ್ಸ್ ಅಕೌಂಟ್ ನ್ನು ತೆರೆಯಲು ಅಗತ್ಯವಿರುವ ದಾಖಲೆಗಳು ಯಾವುವು?

HDFC ಬ್ಯಾಂಕ್ ಸೇವಿಂಗ್ಸ್ ಅಕೌಂಟ್ ನ್ನು ತೆರೆಯಲು ಅರ್ಜಿ ಸಲ್ಲಿಸಲು ನೀವು ಸಿದ್ಧವಾಗಿರಿಸಿಕೊಳ್ಳಬೇಕಾದ ದಾಖಲೆಗಳನ್ನು ಕೆಳಗೆ ಪಟ್ಟಿ ಮಾಡಲಾಗಿದೆ.

·         ಗುರುತಿನ ಪುರಾವೆ (ಡ್ರೈವರ್ಸ್ ಲೈಸೆನ್ಸ್, ಪಾಸ್ ಪೋರ್ಟ್ ಇತ್ಯಾದಿ)

·         ವಿಳಾಸ ಪುರಾವೆ (ಡ್ರೈವರ್ಸ್ ಲೈಸೆನ್ಸ್, ಪಾಸ್ ಪೋರ್ಟ್ ಇತ್ಯಾದಿ)

·         ಪ್ಯಾನ್ ಕಾರ್ಡ್

·         ಅರ್ಜಿದಾರನ ಉದ್ಯೋಗದಾತರು ನೀಡುವ ಪ್ರಮಾಣಪತ್ರ, ಟಿಡಿಎಸ್ ಅನ್ನು ನಿಮ್ಮ ಸಂಬಳದಿಂದ ಕಡಿತಗೊಳಿಸಲಾಗಿದೆ ಎಂಬುದನ್ನು ತೋರಿಸಲು ಫಾರ್ಮ್ 16. ಅರ್ಜಿದಾರನಿಗೆ ಪ್ಯಾನ್ ಕಾರ್ಡ್ ಇಲ್ಲದಿದ್ದಲ್ಲಿ ಇದು ಬೇಕಾಗಬಹುದು.

·         ಇತ್ತೀಚಿನ ಎರಡು ಪಾಸ್ ಪೋರ್ಟ್ ಸೈಸ್ ಫೋಟೋಗ್ರಾಫ್ಸ್

ಸ್ವೀಕಾರಾರ್ಹ ಗುರುತಿನ/ವಿಳಾಸದ ಪುರಾವೆಯ ದಾಖಲೆಗಳ ಪಟ್ಟಿ ಇಲ್ಲಿದೆ.

·         ಮಾನ್ಯ ಪಾಸ್ ಪೋರ್ಟ್

·         ಭಾರತ ಚುನಾವಣಾ ಆಯೋಗ ನೀಡಿರುವ ಮತದಾರರ ಗುರುತಿನ ಕಾರ್ಡ್

·         ಮಾನ್ಯ ಶಾಶ್ವತ ಡ್ರೈವಿಂಗ್ ಲೈಸೆನ್ಸ್

·         ಆಧಾರ್

·         ರಾಜ್ಯ ಸರ್ಕಾರದ ಅಧಿಕಾರಿ ಸಹಿ ಮಾಡಿರುವ NREGA ನೀಡಿರುವ ಒಂದು ಜಾಬ್ ಕಾರ್ಡ್

·         ಹೆಸರು ಮತ್ತು ವಿಳಾಸವನ್ನು ಹೊಂದಿರುವ ರಾಷ್ಟ್ರೀಯ ಜನಸಂಖ್ಯಾ ರೆಜಿಸ್ಟರ್ ನಿಂದ ನೀಡಲಾದ ಒಂದು ಪತ್ರ

ಆನ್‌ಲೈನ್ ಖಾತೆ ತೆರೆಯುವಿಕೆಯನ್ನು ಆಧಾರ್, ಪ್ಯಾನ್ ಕಾರ್ಡ್ ಮತ್ತು ಕಾರ್ಯನಿರ್ವಹಿಸುತ್ತಿರುವ ಮೊಬೈಲ್ ಸಂಖ್ಯೆಯಿಂದ ಸುಲಭವಾಗಿ ಮಾಡಬಹುದು.

Features and Benefits of HDFC Bank Account

How to Open Savings Account Online?

Video KYC for Bank Account Opening