Features


ಮನೆಯಿಂದಲೇ ನಿಮ್ಮ ಉಳಿತಾಯ ಹಾಗೂ ವೇತನ ಖಾತೆಯನ್ನು ತಕ್ಷಣವೇ ತೆರೆಯಿರಿ 

  • ನಿಮ್ಮ ವಯಸ್ಸು ಹದಿನೆಂಟು ಅಥವಾ ಅರವತ್ತಿರಲಿ, ನೀವೂ ಎಂದಿಗೂ ಸುರಕ್ಷಿತ, ತ್ವರಿತ ಮತ್ತು ಅನುಕೂಲಕರ ಪರಿಹಾರಗಳನ್ನು ಬಯಸುವಿರಿ. ಅದ್ದರಿಂದ ನಿಮ್ಮ ಬಿಲ್ ಗಳನ್ನು ಪಾವತಿಸಲು ಅಥವಾ ಹಣವನ್ನು ಕಳುಹಿಸಲು ಹಾಗೂ ಸ್ವೀಕರಿಸಲು ನೀವು ನಿಮ್ಮ ಸ್ಮಾರ್ಟ್ ಫೋನ್ ಅನ್ನು ಬಳಸುವುದಾದರೆ ಖಾತೆಯನ್ನು ತಕ್ಷಣ ತೆರೆಯಲು ಸಹ ಏಕೆ ಬಳಸಬಾರದು? 

  • ಉಳಿತಾಯ ಖಾತೆಯಿಂದ ವೇತನ ಖಾತೆಯವರೆಗೆ, ನಿಮ್ಮ ಮನೆಯ ಸೌಕರ್ಯದಿಂದಲೇ ನಿಮ್ಮ ಎಲ್ಲಾ ದೈನಂದಿನ ಬ್ಯಾಂಕಿಂಗ್ ಅಗತ್ಯಗಳಿಗೆ ತ್ವರಿತವಾಗಿ ಖಾತೆ ತೆರೆಯಲು ಅವಕಾಶವಿದೆ. ಆದ್ದರಿಂದ InstaAccount ಜರ್ನಿ ಮೂಲಕ ತಕ್ಷಣವೇ HDFC ಬ್ಯಾಂಕ್ ಗೆ ಸೇರಿಕೊಳ್ಳಿ.

  • ರೆಗ್ಯುಲರ್ ಸೇವಿಂಗ್ಸ್ ಖಾತೆಯಿಂದ ಪ್ರೀಮಿಯಮ್ ಸೇವಿಂಗ್ಸ್ ಮ್ಯಾಕ್ಸ್ ಖಾತೆಯವರೆಗೂ – ಸೇವಿಂಗ್ಸ್ ಮ್ಯಾಕ್ಸ್ ಖಾತೆ ಅಥವಾ ನಮ್ಮ ಗ್ರಾಹಕೀಯಗೊಳಿಸುವ ಉಳಿತಾಯ ಖಾತೆಗಳು  ಮಹಿಳೆಯರಿಗಾಗಿ, ಹಿರಿಯ ನಾಗರಿಕರಿಗಾಗಿ ಮತ್ತು ಯುವ ಜನರಿಗಾಗಿ ನೀವು InstaAccount ಜರ್ನಿಯ  ಮೂಲಕ ನಮ್ಮ ಯಾವುದೇ ಉಳಿತಾಯ ಖಾತೆಗಳನ್ನು  ಆಯ್ದುಕೊಳ್ಳಬಹುದು.

  • InstaAccount ಜರ್ನಿಯಲ್ಲಿ ಆಯ್ದ ಉತ್ಪನ್ನ ರೂಪಾಂತರದ ಪ್ರಕಾರ ಬ್ಯಾಲನ್ಸ್ ನ ಅವಶ್ಯಕತೆ ಇರುತ್ತದೆ.


ಪ್ರಮುಖ ಮುಖ್ಯಾಂಶಗಳು

  • ನಿಮ್ಮ ಖಾತೆಯ ಸಂಖ್ಯೆಯನ್ನು ಈಗಲೇ ಪಡೆಯಿರಿ 

  • ನೆಟ್/ಮೊಬೈಲ್ ಬ್ಯಾಂಕಿಂಗ್ ಗೆ ತಕ್ಷಣ ಆಕ್ಸೆಸ್ ನ್ನು ಆನಂದಿಸಿ 


ನಿಮಗೆ ತಿಳಿದಿರಬೇಕಾದದ್ದು  


ವೈಶಿಷ್ಟ್ಯಗಳು 

ತಕ್ಷಣ ಖಾತೆ ತೆರೆಯುವಿಕೆ

HDFC ಬ್ಯಾಂಕ್ ನೊಂದಿಗೆ ತ್ವರಿತ ಖಾತೆ ತೆರೆಯುವುದು ಸುಲಭವಾಗಿದೆ. ಖಾತೆಯನ್ನು ತೆರೆಯಲು ನಿಮಗೆ ಚಾಲ್ತಿಯಲ್ಲಿರುವ ಮೊಬೈಲ್ ಸಂಖ್ಯೆ, ಆಧಾರ್ ಸಂಖ್ಯೆ ಮತ್ತು ಪ್ಯಾನ್ ಸಂಖ್ಯೆಯ ಅಗತ್ಯವಿರುತ್ತದೆ.

4 ಸುಲಭ ಹಂತಗಳು 

ನಿಮ್ಮ ಇನ್ಸ್ಟಂಟ್ ಉಳಿತಾಯ ಖಾತೆ ಅಥವಾ ವೇತನ ಖಾತೆಯು  4 ಸುಲಭ ಹಂತಗಳಲ್ಲಿ ಸಂಪೂರ್ಣವಾಗಿ ಕಾರ್ಯನಿರ್ವಹಿಸುವುದು :

  1. ಆಧಾರ್ ಬಳಕೆಯಿಂದ ನಿಮ್ಮ ವಿವರಗಳನ್ನು ನಮೂದಿಸಿ 

  2. OTP ಬಳಸುವ ಮೂಲಕ ನಿಮ್ಮ ವಿವರಗಳನ್ನು ವ್ಯಾಲಿಡೇಟ್ ಮಾಡಿ. 

  3. ಅನ್ಯ ಖಾತೆಯ ಸಂಬಂಧಿತ ಮಾಹಿತಿಯನ್ನು ಪೂರ್ಣಗೊಳಿಸಿ  

  4. ಸಬ್ಮಿಟ್ 

ಖಾತೆ ಸಂಖ್ಯೆ ಮತ್ತು ಕಸ್ಟಮರ್ ಐಡಿ


ನಿಮ್ಮ ಖಾತೆಯ ಸಂಖ್ಯೆ ಮತ್ತು ಕಸ್ಟಮರ್ ಐಡಿಯನ್ನು ಕೂಡಲೇ ಪಡೆದುಕೊಳ್ಳಿ

HDFC ಬ್ಯಾಂಕ್ InstaAccountನ್ನು ಆನ್ಲೈನ್ ನಲ್ಲಿ ತೆರೆದ ಕೂಡಲೇ ನೀವು ನಿಮ್ಮ ಖಾತೆಯ ಸಂಖ್ಯೆ ಹಾಗೂ ಕಸ್ಟಮರ್ ಐಡಿಯನ್ನು ಪಡೆಯುವಿರಿ. ಇದು ತಕ್ಷಣವೇ ಆಗುವುದು!

ಹಣ ವರ್ಗಾಯಿಸುವುದು 

ನಿಮ್ಮ ಖಾತೆಗೆ ತ್ವರಿತವಾಗಿ ಹಣವನ್ನು ವರ್ಗಾಯಿಸಿ:

ನಿಮ್ಮ ಖಾತೆಯನ್ನು ತೆರೆದ ತಕ್ಷಣವೇ ಹಣವನ್ನು ವರ್ಗಾಯಿಸಬಹುದು ಮತ್ತು/ಅಥವಾ ವೇತನವನ್ನು ಜಮಾ ಮಾಡಬಹುದು.

ಹಣವನ್ನು ಹಿಂಪಡೆಯುವುದು (ವಿತ್ ಡ್ರಾಯಲ್


ಎಟಿಎಂಗಳಿಂದ ಸುಲಭವಾಗಿ ಹಣ ತೆಗೆಯುವುದು - ನಿಮ್ಮ ಮೊಬೈಲ್ ಫೋನ್ ಬಳಕೆಯಿಂದ ಕಾರ್ಡ್ ಇಲ್ಲದೆ ಹಣವನ್ನು ಪಡೆಯಬಹುದು:

ಡೆಬಿಟ್ ಕಾರ್ಡ್ ಇಲ್ಲದೆ HDFC ಬ್ಯಾಂಕ್ ಎಟಿಎಂನಿಂದ ಹಣ ತೆಗೆದುಕೊಳ್ಳುವುದನ್ನು HDFC ಬ್ಯಾಂಕ್ InstaAccountನೊಂದಿಗೆ ಮಾಡಬಹುದು. ಎಟಿಎಂನಲ್ಲಿ ಕೇವಲ ಕಾರ್ಡ್ಲೆಸ್ ಆಯ್ಕೆಯನ್ನು ಮಾಡಿ ಮತ್ತು ಸೂಚನೆಗಳನ್ನು ಅನುಸರಿಸಿ

ನೆಟ್ ಬ್ಯಾಂಕಿಂಗ್ ಮತ್ತು ಮೊಬೈಲ್ ಬ್ಯಾಂಕಿಂಗ್ 


ನೆಟ್ ಬ್ಯಾಂಕಿಂಗ್ ಮತ್ತು ಮೊಬೈಲ್ ಬ್ಯಾಂಕಿಂಗ್ ನಿಮ್ಮ ಖಾತೆಗೆ ಸ್ವಯಂಚಾಲಿತವಾಗಿ ಸಕ್ರಿಯಗೊಳಿಸಲಾಗಿದೆ:


ನಿಮ್ಮ ಇನ್ಸ್ಟಂಟ್ ಆನ್ ಲೈನ್ ಉಳಿತಾಯ ಖಾತೆ ಅಥವಾ ವೇತನ ಖಾತೆಯು ನೆಟ್ ಬ್ಯಾಂಕಿಂಗ್ ಮತ್ತು ಮೊಬೈಲ್ ಬ್ಯಾಂಕಿಂಗ್ ಗೆ  ಸಕ್ರಿಯಗೊಳಿಸುವುದರಿಂದ, ಒಂದು ಸಲ ಪಾಸ್ವರ್ಡ್ ಹೊಂದಿಸಿದ ಮೇಲೆ ನಿಮ್ಮ ಬ್ಯಾಲನ್ಸ್ ತಕ್ಷಣವೆ ನೋಡಲು ತುಂಬಾ ಸುಲಭವಾಗಿರುತ್ತದೆ.

ಹಣ ಕಳುಹಿಸುವುದು 

ನಿಮ್ಮ ಖಾತೆಯನ್ನು ತೆರೆದ ನಂತರ ತ್ವರಿತವಾಗಿ 48 ಗಂಟೆಗಳಲ್ಲಿ ಹಣವನ್ನು ಕಳುಹಿಸಬಹುದು ಮತ್ತು ಪಾವತಿಸಬಹುದು:

ನಿಮ್ಮ ಖಾತೆಯನ್ನು ತೆರೆದ ತಕ್ಷಣವೇ ನಿಮ್ಮ ಸುರಕ್ಷೆತೆಗೆಗಾಗಿ, ಹೊರಹೋಗುವ ಪಾವತಿಗಳು ಕೇವಲ 48 ಗಂಟೆಗಳ ನಂತರ ಸಕ್ರಿಯಗೊಳಿಸಲಾಗಿರುತ್ತದೆ. ತದನಂತರ ಸುಲಭವಾಗಿ ನಿಮ್ಮ ಹಣವನ್ನು ಕಳುಹಿಸಬಹುದು ಮತ್ತು ಪಾವತಿಸಬಹುದು.


ವೈಶಿಷ್ಟ್ಯಗಳು 

ತಕ್ಷಣ ಖಾತೆ ತೆರೆಯುವಿಕೆ

HDFC ಬ್ಯಾಂಕ್ ನೊಂದಿಗೆ ತ್ವರಿತ ಖಾತೆ ತೆರೆಯುವುದು ಸುಲಭವಾಗಿದೆ. ಖಾತೆಯನ್ನು ತೆರೆಯಲು ನಿಮಗೆ ಚಾಲ್ತಿಯಲ್ಲಿರುವ ಮೊಬೈಲ್ ಸಂಖ್ಯೆ, ಆಧಾರ್ ಸಂಖ್ಯೆ ಮತ್ತು ಪ್ಯಾನ್ ಸಂಖ್ಯೆಯ ಅಗತ್ಯವಿರುತ್ತದೆ.

4 ಸುಲಭ ಹಂತಗಳು 

ನಿಮ್ಮ ಇನ್ಸ್ಟಂಟ್ ಉಳಿತಾಯ ಖಾತೆ ಅಥವಾ ವೇತನ ಖಾತೆಯು  4 ಸುಲಭ ಹಂತಗಳಲ್ಲಿ ಸಂಪೂರ್ಣವಾಗಿ ಕಾರ್ಯನಿರ್ವಹಿಸುವುದು :

  1. ಆಧಾರ್ ಬಳಕೆಯಿಂದ ನಿಮ್ಮ ವಿವರಗಳನ್ನು ನಮೂದಿಸಿ 

  2. OTP ಬಳಸುವ ಮೂಲಕ ನಿಮ್ಮ ವಿವರಗಳನ್ನು ವ್ಯಾಲಿಡೇಟ್ ಮಾಡಿ. 

  3. ಅನ್ಯ ಖಾತೆಯ ಸಂಬಂಧಿತ ಮಾಹಿತಿಯನ್ನು ಪೂರ್ಣಗೊಳಿಸಿ  

  4. ಸಬ್ಮಿಟ್ 

ಖಾತೆ ಸಂಖ್ಯೆ ಮತ್ತು ಕಸ್ಟಮರ್ ಐಡಿ


ನಿಮ್ಮ ಖಾತೆಯ ಸಂಖ್ಯೆ ಮತ್ತು ಕಸ್ಟಮರ್ ಐಡಿಯನ್ನು ಕೂಡಲೇ ಪಡೆದುಕೊಳ್ಳಿ: 

HDFC ಬ್ಯಾಂಕ್ ನ InstaAccountನ್ನು ಆನ್ಲೈನ್ ನಲ್ಲಿ ತೆರೆದ ಕೂಡಲೇ ನೀವು ನಿಮ್ಮ ಖಾತೆಯ ಸಂಖ್ಯೆ ಹಾಗೂ ಕಸ್ಟಮರ್ ಐಡಿಯನ್ನು ಪಡೆಯುವಿರಿ. ಇದು ತಕ್ಷಣವೇ ಆಗುವುದು!

ಹಣ ವರ್ಗಾಯಿಸುವುದು 

ನಿಮ್ಮ ಖಾತೆಗೆ ತ್ವರಿತವಾಗಿ ಹಣವನ್ನು ವರ್ಗಾಯಿಸಿ:

ನಿಮ್ಮ ಖಾತೆಯನ್ನು ತೆರೆದ ತಕ್ಷಣವೇ ಹಣವನ್ನು ವರ್ಗಾಯಿಸಬಹುದು ಮತ್ತು/ಅಥವಾ ವೇತನವನ್ನು ಜಮಾ ಮಾಡಬಹುದು.

ಹಣವನ್ನು ಹಿಂಪಡೆಯುವುದು (ವಿತ್ ಡ್ರಾಯಲ್


ಎಟಿಎಂಗಳಿಂದ ಸುಲಭವಾಗಿ ಹಣ ತೆಗೆಯುವುದು - ನಿಮ್ಮ ಮೊಬೈಲ್ ಫೋನ್ ಬಳಕೆಯಿಂದ ಕಾರ್ಡ್ ಇಲ್ಲದೆ ಹಣವನ್ನು ಪಡೆಯಬಹುದು:

ಡೆಬಿಟ್ ಕಾರ್ಡ್ ಇಲ್ಲದೆ HDFC ಬ್ಯಾಂಕ್ ಎಟಿಎಂನಿಂದ ಹಣ ತೆಗೆದುಕೊಳ್ಳುವುದನ್ನು HDFC ಬ್ಯಾಂಕ್ InstaAccountನೊಂದಿಗೆ ಮಾಡಬಹುದು. ಎಟಿಎಂನಲ್ಲಿ ಕೇವಲ ಕಾರ್ಡ್ಲೆಸ್ ಆಯ್ಕೆಯನ್ನು ಮಾಡಿ ಮತ್ತು ಸೂಚನೆಗಳನ್ನು ಅನುಸರಿಸಿ

ನೆಟ್ ಬ್ಯಾಂಕಿಂಗ್ ಮತ್ತು ಮೊಬೈಲ್ ಬ್ಯಾಂಕಿಂಗ್ 


ನೆಟ್ ಬ್ಯಾಂಕಿಂಗ್ ಮತ್ತು ಮೊಬೈಲ್ ಬ್ಯಾಂಕಿಂಗ್ ನಿಮ್ಮ ಖಾತೆಗೆ ಸ್ವಯಂಚಾಲಿತವಾಗಿ ಸಕ್ರಿಯಗೊಳಿಸಲಾಗಿದೆ:


ನಿಮ್ಮ ಇನ್ಸ್ಟಂಟ್ ಆನ್ ಲೈನ್ ಉಳಿತಾಯ ಖಾತೆ ಅಥವಾ ವೇತನ ಖಾತೆಯು ನೆಟ್ ಬ್ಯಾಂಕಿಂಗ್ ಮತ್ತು ಮೊಬೈಲ್ ಬ್ಯಾಂಕಿಂಗ್ ಗೆ  ಸಕ್ರಿಯಗೊಳಿಸುವುದರಿಂದ, ಒಂದು ಸಲ ಪಾಸ್ವರ್ಡ್ ಹೊಂದಿಸಿದ ಮೇಲೆ ನಿಮ್ಮ ಬ್ಯಾಲನ್ಸ್ ತಕ್ಷಣವೆ ನೋಡಲು ತುಂಬಾ ಸುಲಭವಾಗಿರುತ್ತದೆ.

ಹಣ ಕಳುಹಿಸುವುದು 

ನಿಮ್ಮ ಖಾತೆಯನ್ನು ತೆರೆದ ನಂತರ ತ್ವರಿತವಾಗಿ 48 ಗಂಟೆಗಳಲ್ಲಿ ಹಣವನ್ನು ಕಳುಹಿಸಬಹುದು ಮತ್ತು ಪಾವತಿಸಬಹುದು:

ನಿಮ್ಮ ಖಾತೆಯನ್ನು ತೆರೆದ ತಕ್ಷಣವೇ ನಿಮ್ಮ ಸುರಕ್ಷೆತೆಗೆಗಾಗಿ, ಹೊರಹೋಗುವ ಪಾವತಿಗಳು ಕೇವಲ 48 ಗಂಟೆಗಳ ನಂತರ ಸಕ್ರಿಯಗೊಳಿಸಲಾಗಿರುತ್ತದೆ. ತದನಂತರ ಸುಲಭವಾಗಿ ನಿಮ್ಮ ಹಣವನ್ನು ಕಳುಹಿಸಬಹುದು ಮತ್ತು ಪಾವತಿಸಬಹುದು.


ಆಗಾಗ ಕೇಳಲಾಗುವ ಪ್ರಶ್ನೆಗಳು

HDFC ಬ್ಯಾಂಕ್ InstaAccount ಜರ್ನಿ ಎಂದರೇನು?

  • HDFC ಬ್ಯಾಂಕ್ ನ InstaAccount ಜರ್ನಿ ಸಂಪೂರ್ಣವಾಗಿ ಡಿಜಿಟಲ್ ಆಗಿರುವುದು, ಸಂಪರ್ಕ ಪ್ರಕ್ರಿಯೆಯಿಲ್ಲದೆ ಖಾತೆಯನ್ನು ತೆರೆಯಲು ನಿಮಗೆ ಸಹಾಯ ಮಾಡುತ್ತದೆ. ಇದು ನಮ್ಮ ರೆಗ್ಯುಲರ್ ಉಳಿತಾಯ ಖಾತೆಯಾಗಿರಬಹುದು  ಅಥವಾ ನಮ್ಮ ಪ್ರಿಮಿಯಂ ಸೇವಿಂಗ್ಸ್ ಮ್ಯಾಕ್ಸ್ ಖಾತೆಯಾಗಿರಬಹುದು, ನಿಮ್ಮ ಮನೆಯ ಸೌಕರ್ಯದಿಂದಲೇ ತಕ್ಷಣವೇ ತೆರೆಯಬಹುದು. ನೀವು ಖಾತೆ ಸಂಖ್ಯೆ ಮತ್ತು ಕಸ್ಟಮರ್ ಐಡಿ ಸಹ ಬೇಗನೆ ಪಡೆಯಬಹುದು.

  • InstaAccount ಜರ್ನಿಯಲ್ಲಿ ಆಯ್ದ ಉತ್ಪನ್ನ ರೂಪಾಂತರದ ಪ್ರಕಾರ ಬ್ಯಾಲನ್ಸ್ ನ ಅವಶ್ಯಕತೆ ಇರುತ್ತದೆ.

  • ನೆಟ್ ಮತ್ತು ಮೊಬೈಲ್ ಬ್ಯಾಂಕಿಂಗ್ ನೊಂದಿಗೆ ನಿಮ್ಮ ಖಾತೆಯು ಪ್ರೀ-ಸೆಟ್ ಆಗಿರುತ್ತದೆ ಅಂದರೆ ನೀವು ನಿಮ್ಮ ಖಾತೆಯಲ್ಲಿ ಹಣ ಜಮಾ ಮಾಡಿದ ಕ್ಷಣದಿಂದಲೇ HDFC ಬ್ಯಾಂಕ್ ಉಳಿತಾಯ ಖಾತೆಯ ಬಳಕೆಯಿಂದ ಬ್ಯಾಂಕಿಂಗ್ ಪ್ರಾರಂಭಿಸಬಹುದು.  

  • InstaAccount ಜರ್ನಿಯ ಮೂಲಕ ಖಾತೆಗಳನ್ನು ತೆರೆದ ನಂತರ ಕೇವಲ ಒಂದು ವರ್ಷದವರೆಗೆ ಮಾನ್ಯವಾಗಿರುತ್ತದೆ. ಏಕೆಂದರೆ ಅದು ಸೀಮಿತ KYC/ಗ್ರಾಹಕರ ಗುರುತಿನ ಪ್ರಕ್ರಿಯೆಯನ್ನು ಬಳಸುತ್ತದೆ. ಈ ಸಮಯದಲ್ಲಿ ನಿಮ್ಮ ಖಾತೆಯನ್ನು ಡಿಜಿಟಲ್ ಆಗಿ ತೆರೆಯಲು ನಿಮ್ಮ ಆಯ್ಕೆಯ ಖಾತೆಯನ್ನು ರೆಗ್ಯುಲರ್ ಸೇವಿಂಗ್ಸ್ ಖಾತೆಯನ್ನಾಗಿ ಪರಿವರ್ತಿಸಲು ನಿಮಗೆ ಸಂಪೂರ್ಣ KYC / ಗ್ರಾಹಕರ ಗುರುತಿನ ಪ್ರಕ್ರಿಯೆಯನ್ನು ಪೂರ್ಣಗೊಳಿಸಲು ನಮ್ಮ ಯಾವುದೇ ಶಾಖೆಗಳಿಗೆ ಭೇಟಿ ನೀಡಬಹುದು ಅಥವಾ ವಿಡಿಯೋ KYCಯನ್ನು ಆಯ್ದುಕೊಳ್ಳಬಹುದು.


HDFC ಬ್ಯಾಂಕ್ InstaAccount ಗಳ ಪ್ರಮುಖ ಪ್ರಯೋಜನಗಳಾವುವು?

  • ನೀವೇ ಸ್ವತಃ 2 ನಿಮಿಷಗಳಲ್ಲಿ ಈ ಖಾತೆಯನ್ನು ತೆರೆಯಬಹುದು. 

  • ನಿಮ್ಮ ಖಾತೆಯ ಸಂಖ್ಯೆ ಮತ್ತು ಕಸ್ಟಮರ್ ಐಡಿಯನ್ನು ನೀವು ಕೂಡಲೇ ಪಡೆಯುವಿರಿ. 

  • ನೆಟ್ ಮತ್ತು ಮೊಬೈಲ್ ಬ್ಯಾಂಕಿಂಗ್ ನೊಂದಿಗೆ ನಿಮ್ಮ ಖಾತೆಯು ಪ್ರೀ-ಸೆಟ್ ಆಗಿ ಬರುವುದು ಆದ್ದರಿಂದ ನೀವು ನಿಮ್ಮ ಖಾತೆಯಲ್ಲಿ ಹಣ ಜಮಾ ಮಾಡಿದ ಕ್ಷಣದಿಂದಲೇ ನಿಮ್ಮ ಬ್ಯಾಂಕಿಂಗ್ ಪ್ರಾರಂಭವಾಗುವುದು.

  • InstaAccount ನಿಂದ ನೀವು ನಿಮ್ಮ ಎಲ್ಲಾ ಬ್ಯಾಂಕಿಂಗ್ ಅಂದರೆ ಬಿಲ್ ಗಳನ್ನು ಪಾವತಿಸುವುದು, ಹಣ ಕಳುಹಿಸುವುದು ಮತ್ತು ಸ್ವೀಕರಿಸುವುದು, HDFC ಬ್ಯಾಂಕ್ ಎಟಿಎಂನಿಂದ ಹಣ ತೆಗೆದುಕೊಳ್ಳುವುದು ಇತ್ಯಾದಿಗಳನ್ನು ಮಾಡಬಹುದು.

  • InstaAccountನ್ನು ಬಳಸಿ ನೀವು ಸ್ಥಿರ ಠೇವಣಿಯನ್ನು ಸಹ ತರೆಯಬಹುದು. 


HDFC ಬ್ಯಾಂಕ್ ಇನ್ಸ್ಟಾ ಖಾತೆಯನ್ನು ನಾನು ಹೇಗೆ ತೆರೆಯಬಹುದು?

ನೀವು ಕೇವಲ ಕ್ಲಿಕ್ ಹಿಯರ್ ಅಥವಾ ಪ್ಲೇ ಸ್ಟೋರ್ ನಿಂದ HDFC ಬ್ಯಾಂಕ್ ಇನ್ಸ್ಟಂಟ್ ಅಕೌಂಟ್ ಆ್ಯಪ್ ಅನ್ನು ಡೌನ್ ಲೋಡ್ ಮಾಡಬಹುದು. ನಿಮ್ಮ ಹತ್ತಿರ ಚಾಲ್ತಿಯಲ್ಲಿರುವ ಮೊಬೈಲ್ ಸಂಖ್ಯೆ ಮತ್ತು ಆಧಾರ್ ಇದ್ದರೆ ಸಾಕು ಈ ಖಾತೆಯನ್ನು ಸರಳ ಹಾಗೂ ತ್ವರಿತವಾಗಿದೆ ತೆರೆಯಬಹುದು.

ಅಗತ್ಯವಾದ ವಿವರಗಳನ್ನು ಪೂರ್ಣಗೊಳಿಸಿ ಮತ್ತು ನಿಮ್ಮ ಆಧಾರ್ ಮೂಲಕ ಪರಿಶೀಲಿಸಿಕೊಳ್ಳಿ.


ನಾನು ಇದನ್ನು ಹೇಗೆ ಉಪಯೋಗಿಸಬಹುದು?

ನೆಟ್ ಬ್ಯಾಂಕಿಂಗ್ ಗೆ ನೀವು ಈಗಾಗಲೇ ನೋಂದಾಯಿತರಾಗಿದ್ದೀರಿ. ನೀವು ಮಾಡಬೇಕಾದುದೆಂದರೆ, ನಿಮ್ಮ ಪಾಸ್ವರ್ಡ್ ಅನ್ನು ಸೆಟ್ ಮಾಡಬೇಕು. ಸ್ಪ್ಲಿಟ್ OTP (ನೀವು  ಭಾಗಶಃ OTP ಇಮೇಲ್ ಮೂಲಕ ಹಾಗೂ ಭಾಗಶಃ OTP ಮೊಬೈಲ್ ಗೆ ಪಡೆಯುವಿರಿ) ಆಧಾರದ ಮೇಲೆ ನಿಮ್ಮ IPIN ಸೆಟ್ ಮಾಡಲು ನಿಮ್ಮ ಖಾತೆ ಸಂಖ್ಯೆಯನ್ನು ರಚಿಸಿದ ಅನಂತರ ನಿಮಗೆ ಒಂದು ಇಮೇಲ್ ಮೂಲಕ ಲಿಂಕ್  ಕಳುಹಿಸಲಾಗುವುದು. ಒಂದು ಸಲ ನೀವು ನಿಮ್ಮ ಖಾತೆಯನ್ನು ತೆರೆದು ನಿಮ್ಮ ನೆಟ್ ಬ್ಯಾಂಕಿಂಗ್ ಪಾಸ್ವರ್ಡ್ ಅನ್ನು ಸೆಟ್ ಮಾಡಿದ ಮೇಲೆ ನೀವು ಎಲ್ಲಿಂದಾದರು ಈ ಖಾತೆಗೆ ಹಣ ವರ್ಗಾಯಿಸಬಹುದು. ಖಾತೆ ಸಂಖ್ಯೆ ಪಡೆದ ನಂತರ ನೀವು ನಿಮ್ಮ ಸಂಬಳವನ್ನು ನಿಮ್ಮ HDFC ಬ್ಯಾಂಕ್ InstaAccountಗೆ ಜಮಾ ಮಾಡಬಹುದು. ಖಾತೆ ತೆರೆಯುವ ಪ್ರಕ್ರಿಯೆಯ ಸಮಯದಲ್ಲಿ ಒಂದು ಸಲ ನಿಮ್ಮ ನೆಟ್ ಬ್ಯಾಂಕಿಂಗ್ ಪಾಸ್ವರ್ಡ್ ಸೆಟ್ ಮಾಡಿದ ಮೇಲೆ ನೀವು ಈ ಖಾತೆಯ ಬಳಕೆಯಿಂದ ನಿಮ್ಮ ಬ್ಯಾಂಕಿಂಗ್ ವಹಿವಾಟುಗಳನ್ನು ಮಾಡಬಹುದು.


ಅರ್ಹತೆ 

HDFC ಬ್ಯಾಂಕ್ InstaAccountನ್ನು ಯಾರು ತೆರೆಯಬಹುದು?

ಭಾರತೀಯ ನಿವಾಸಿ ವ್ಯಕ್ತಿಗಳಾದ 18 ವಯಸ್ಸು ಹಾಗೂ ಮೇಲ್ಪಟ್ಟವರು ಮತ್ತು HDFC ಬ್ಯಾಂಕ್ ಖಾತೆ ಇಲ್ಲವಾದವರು ಖಾತೆಯನ್ನು ತೆರೆಯಬಹುದು.


NRI, HUF, ಅಸ್ತಿತ್ವದಲ್ಲ್ಲಿರುವ HDFC ಬ್ಯಾಂಕ್ ಗ್ರಾಹಕರು HDFC ಬ್ಯಾಂಕ್ InstaAccountನ್ನು ತೆರೆಯಬಹುದೆ?

ಇಲ್ಲಾ. NRIs, HUF, ಅಸ್ತಿತ್ವದಲ್ಲಿರುವ HDFC ಬ್ಯಾಂಕ್ ಗ್ರಾಹಕರು HDFC ಬ್ಯಾಂಕ್ ಇನ್ಸ್ಟಾ ಖಾತೆಯನ್ನು ತೆರೆಯಲು ಸಾಧ್ಯವಿಲ್ಲ.


ನಾನು HDFC ಬ್ಯಾಂಕ್ InstaAccountನ ಮೂಲಕ ಜಂಟಿ ಖಾತೆಯನ್ನು ತೆರೆಯಬಹುದೆ?

ಇಲ್ಲಾ. ಈ ಖಾತೆಯನ್ನು ಒಬ್ಬ ವ್ಯಕ್ತಿಯು ಮಾತ್ರ ಹೊಂದಬಹುದು. 


ಟ್ರಬಲ್ ಶೂಟಿಂಗ್ / ಅಪ್ಲಿಕೇಶನ್ ಪ್ರೋಸೆಸ್ ಸಂಬಂಧದಲ್ಲಿ 

ಅಪ್ಲಿಕೇಶನ್ ಪ್ರಕ್ರಿಯೆ ಶಾಖೆಯನ್ನು ಕೇಳುತ್ತಿದೆ, ನಾನು ಯಾವುದನ್ನು ಆಯ್ಕೆಮಾಡಬೇಕು?

ನಿಮ್ಮ ಹತ್ತಿರದ HDFC Bank ಶಾಖೆಯನ್ನು ಆಯ್ಕೆ ಮಾಡಿ.


HDFC ಬ್ಯಾಂಕ್ InstaAccount ಅಪ್ಲಿಕೇಶನ್ ಪ್ರೋಸೆಸ್ ಲಿಂಕ್ ನಲ್ಲಿ ಕಾರ್ಪೋರೆಟ್ ಹೆಸರನ್ನು ನಾನು ಹೇಗೆ ಅಯ್ಕೆಮಾಡಿಕೊಳ್ಳಲಿ?

ನಿಮ್ಮ ಕಂಪನಿಯ ಮೊದಲು ಮೂರು ಅಕ್ಷರಗಳನ್ನು ನಮೂದಿಸಿ ಮತ್ತು ಪಟ್ಟಿಯಿಂದ ಆಯ್ಕೆ ಮಾಡಿ 


ನನಗೆ ಆಧಾರ್ OTP ಪಡೆಯಲು ಏಕೆ ಸಾಧ್ಯವಾಗುತ್ತಿಲ್ಲ?

ನೀವು ಖಚಿತ/ಪರಿಶೀಲನೆಗಾಗಿ OTP ಯನ್ನು ಪಡೆಯುವುದಕ್ಕೆ ನಿಮ್ಮ ಪ್ರಸ್ತುತ ಮೊಬೈಲ್ ಸಂಖ್ಯೆ ಯನ್ನು UIDAI/ಆಧಾರ್ ವೆಬ್ಸೈಟ್ ನಲ್ಲಿ ನಮುದಿಸದಿರಬೇಕು. 

ನೀವು ಒಂದು ಉತ್ತಮ ನೆಟ್ವರ್ಕ್ ಪ್ರದೇಶದಲ್ಲಿದ್ದೀರಿ ಎಂದು ಸಹ ಖಚಿತಪಡಿಸಬೇಕು.


ನಾನು ಉಪಯೋಗಿಸುತ್ತಿರುವ ಮೊಬೈಲ್ ಸಂಖ್ಯೆಯು ಆಧಾರ್ ಗೆ ಲಿಂಕ್ ಆಗದಿದ್ದಲ್ಲಿ ಖಾತೆಯನ್ನು ತೆರೆಯಲು ಸಾಧ್ಯವಿದೆಯೇ?

ಹೌದು ಸಾಧ್ಯವಿದೆ. ನಿಮ್ಮ ಪಾಸ್ ಪೋರ್ಟ್ , ಡ್ರೈವಿಂಗ್ ಲೈಸೆನ್ಸ್ ಅಥವಾ ವೋಟರ್ ಐಡಿ ಕಾರ್ಡ್ ಐಡಿಗಳಂತಹ ಇತರ ರೂಪಗಳಲ್ಲಿ ಸಹ ಬಳಸಬಹುದು, ಆದರೆ ಈ ಸಂದರ್ಭಗಳಲ್ಲಿ ನೀವು ಖಾತೆ ಸಂಖ್ಯೆಯನ್ನು ಪಡೆಯುವುದಿಲ್ಲ. ಖಾತೆಯ ಸಂಖ್ಯೆ ಒದಗಿಸುವ ಮುನ್ನ HDFC ಬ್ಯಾಂಕ್ ಶಾಖೆಯ ತಂಡ ನಿಮ್ಮನ್ನು ಸಂಪರ್ಕಿಸುವರು.


ನನ್ನ ಮೇಲಿಂಗ್ ಮತ್ತು ಶಾಶ್ವತ ವಿಳಾಸಗಳು ವಿಭಿನ್ನವಾಗಿರಬಹುದೇ?

ಇರಬಹುದು. ನಿಮ್ಮ ಮೇಲಿಂಗ್ ಮತ್ತು ಶಾಶ್ವತ ವಿಳಾಸಗಳು ವಿಭಿನ್ನವಾಗಿರಬಹುದು.


OTP ಆಧಾರ್ ಪರಿಶೀಲನೆಗಾಗಿ ನನ್ನ ಮೇಲಿಂಗ್ ವಿಳಾಸವು ಒದಗಿಸುವುದು ಕಡ್ಡಾಯವಾಗಿರುತ್ತದೆಯೇ?

ಇಲ್ಲ. ಆಧಾರ್ ಪರಿಶೀಲನೆಗಾಗಿ ಮೇಲಿಂಗ್ ವಿಳಾಸವು ಒದಗಿಸುವುದು ಕಡ್ಡಾಯವಿರುವುದಿಲ್ಲ.


ನಾನು ಪಡೆದ UIDAI/ಆಧಾರ್ ನಿಂದ ವಿವರಗಳನ್ನು ಬದಲಾಯಿಸಬಹುದೆ?

UIDAI ನಿಂದ ಪಡೆದ ಹೆಸರು ಮತ್ತು ವಿಳಾಸದ ವಿವರಗಳನ್ನು ಮಾರ್ಪಡಿಸಲಾಗುವುದಿಲ್ಲ. ಈ ವಿವರಗಳನ್ನು ಬಳಸಿಕೊಂಡು ನಿಮ್ಮ ಖಾತೆಯನ್ನು ತೆರೆಯಲಾಗುವುದು. 


ಆಧಾರ ಇಲ್ಲದೆ ಮತ್ತು ಇತರ KYC ದಾಖಲೆಗಳೊಂದಿಗೆ ಖಾತೆಯನ್ನು ತೆರೆಯಬಹುದೆ?

ತೆರೆಯಬಹುದು. ಅನ್ಯ ಖಾತೆಗಳಾದ ಆಧಾರ್ ಕಾರ್ಡ್ ಪ್ರತಿ, ಡ್ರೈವಿಂಗ್ ಲೈಸೆನ್ಸ್ , ವೋಟರ್ ಐಡಿ ಕಾರ್ಡ್ ಅಥವಾ ಪಾಸ್ ಪೋರ್ಟ್ ಗಳಿಂದ ಖಾತೆಗಳನ್ನು ತೆರೆಯಬಹುದು. ಆದರೆ ಈ ಸಂದರ್ಭಗಳಲ್ಲಿ ನೀವು ಖಾತೆ ಸಂಖ್ಯೆಯನ್ನು ತ್ವರಿತವಾಗಿ ಪಡೆಯುವುದಿಲ್ಲ. ಖಾತೆಯ ಸಂಖ್ಯೆ ಒದಗಿಸುವ ಮುನ್ನ HDFC ಬ್ಯಾಂಕ್ ಶಾಖೆಯ ತಂಡ ನಿಮ್ಮನ್ನು ಸಂಪರ್ಕಿಸುವುದು.


ಪ್ಯಾನ್ ಇಲ್ಲದೆ ಖಾತೆಯನ್ನು ತೆರೆಯಬಹುದೆ?

ನಿಮ್ಮ ವಾರ್ಷಿಕ ಆದಾಯ 2.5 ಲಕ್ಷಕ್ಕಿಂತಲೂ ಅಧಿಕವಾಗಿದ್ದಲ್ಲಿ ಪ್ಯಾನ್ /ಪ್ಯಾನ್ ಸ್ವೀಕೃತಿ ಅಗತ್ಯವಿರುತ್ತದೆ 


InstaAccountನ್ನು ತೆರೆಯಲು ಆಧಾರ್ ಕಾರ್ಡ್ ಪ್ರತಿ /ಸಂಖ್ಯೆ ಒದಗಿಸುವುದು ಕಡ್ಡಾಯವೇ?

ಇಲ್ಲಾ. ಆಧಾರ್ ಬಳಸುವುದು ಕಡ್ಡಾಯವಿಲ್ಲ. ಆದರೆ ಇದು ನಿಮ್ಮ ಪ್ರಕ್ರಿಯೆಗೊಳಿಸುವಿಕೆಯನ್ನು ತ್ವರಿತ ಮತ್ತು ಸರಳವಾಗಿ ಮಾಡುವುದು, ಏಕೆಂದರೆ ನಿಮ್ಮ ವಿವರಗಳ ಪರಿಶೀಲನೆಯು ವೇಗವಾಗಿ ಆಗುವುದು ಮತ್ತು ಆಧಾರ್ ನಿಂದ ನಿಮ್ಮ ಖಾತೆ ಸಂಖ್ಯೆಯನ್ನು ವೇಗವಾಗಿ ಪಡೆಯಬಹುದು. KYC ದಾಖಲೆಗಳಾದ ನಿಮ್ಮ ಪಾಸ್ ಪೋರ್ಟ್, ಡ್ರೈವಿಂಗ್ ಲೈಸೆನ್ಸ್ ,ಅಥವಾ ವೋಟರ್ ಐಡಿ ಕಾರ್ಡ್ ಇವೆಲ್ಲಾ ನಿಧಾನವಾದ ಪ್ರಕ್ರಿಯೆಗಳು. ಏಕಂದೆರೆ ನಿಮ್ಮ ಖಾತೆ ಸಂಖ್ಯೆಯನ್ನು ಪಡೆಯಲು HDFC ಬ್ಯಾಂಕ್ ಮೊದಲು ನಿಮ್ಮನ್ನು ಸಂಪರ್ಕಿಸುವದು.


ನನ್ನ ಪ್ಯಾನ್ ಕಾರ್ಡ್ ಪ್ರತಿಯನ್ನು ಅಪ್ ಲೋಡ್ ಮಾಡುವುದು ಕಡ್ಡಾಯವೇ?

ಇಲ್ಲಾ. ನಿಮಗೆ ಪ್ಯಾನ್ ಕಾರ್ಡ್ ಪ್ರತಿಯನ್ನು ಅಪ್ ಲೋಡ್ ಮಾಡುವುದು ಕಡ್ಡಾಯವಿಲ್ಲ.


ನನ್ನ ಖಾತೆಯು ತೆರೆದಿದೆ ಎಂದು ನನಗೆ ಹೇಗೆ ತಿಳಿಯುವುದು?

ನೀವು ನಿಮ್ಮ ಆಧಾರ್ ಬಳಸಿದ್ದರಿಂದ ನಿಮ್ಮ ಖಾತೆಯ ಸಂಖ್ಯೆಯನ್ನು ತ್ವರಿತವಾಗಿ ಪಡೆಯುವಿರಿ. ನೀವು ಇತರ ಐಡಿ ದಾಖಲೆಗಳನ್ನು ಬಳಸುತ್ತಿದ್ದಲ್ಲಿ ನೀವು ನಿಮ್ಮ ಅಪ್ಲಿಕೇಶನ್ ಅನ್ನು ರೆಫೆರೆನ್ಸ್ ಸಂಖ್ಯೆಯಿಂದ ಈ ಲಿಂಕ್  – Track My Application

ಅನ್ನು ಕ್ಲಿಕ್ ಮಾಡುವ ಮೂಲಕ ನೋಡಬಹುದು.


ನನಗೆ ನನ್ನ ಖಾತೆಯ ಸಂಖ್ಯೆ ಯಾವಾಗ ಸಿಗುವುದು?

ನಿಮ್ಮ ಆಧಾರ್ ವಿವರಗಳನ್ನು UIDAI (ಯುನಿಕ್  ಐಡೆಂಟಿಫಿಕೆಶನ್ ಅಥೋರಿಟಿ ಆಫ್ ಇಂಡಿಯಾ) ಆನ್ ಲೈನ್ ಮೂಲಕ ಪರಿಶೀಲಿಸಿದ ನಂತರ ತಕ್ಷಣವೇ ನೀವು ನಿಮ್ಮ ಕಸ್ಟಮರ್ ಐಡಿ ಮತ್ತು ಖಾತೆಯ ಸಂಖ್ಯೆಯನ್ನು ನೀಡಲಾಗುವುದು.

ನೀವು ಅನ್ಯ ರೂಪಗಳಲ್ಲಿ ಐಡಿಗಳನ್ನು ಬಳಸಿದ್ದಲ್ಲಿ, ಸ್ವಲ್ಪ ಸಮಯ ಬೇಕಾಗುತ್ತದೆ ಏಕೆಂದರೆ ಖಾತೆಯ ಸಂಖ್ಯೆಯನ್ನು ಒದಗಿಸುವ ಮುನ್ನ HDFC ಬ್ಯಾಂಕ್ ಶಾಖೆಯ ತಂಡ ನಿಮ್ಮನ್ನು ಸಂಪರ್ಕಿಸುವುದು.


ಅನ್ಯ KYC ದಾಖಲೆಗಳನ್ನು ಬಳಸಿದ್ದಲ್ಲಿ ನಾನು ಖಾತೆಯ ಸಂಖ್ಯೆಯನ್ನು ತ್ವರಿತವಾಗಿ ಪಡೆಯಬಹುದೇ?

ನೀವು ಆಧಾರ್ ಹೊರತು ಅನ್ಯ ರೂಪದಲ್ಲಿ ಐಡಿ ಬಳಸಿದ್ದಲ್ಲಿ ಖಾತೆಯ ಸಂಖ್ಯೆಯು ತ್ವರಿತವಾಗಿ ರಚನೆಯಾಗಿರುವುದಿರಲ್ಲ. ನಮ್ಮ ಶಾಖೆಯ ತಂಡದಿಂದ ಖಚಿತಪಡಿಸಿಕೊಳ್ಳವ/ಪರಿಶೀಲಿಸುವವರೆಗೆ ನಿಮಗೆ ರೆಫೆರೆನ್ಸ್ ಸಂಖ್ಯೆಯನ್ನು ನೀಡಲಾಗಿರುತ್ತದೆ. ನಿಮಗೆ ಒದಗಿಸಿರುವ ರೆಫೆರೆನ್ಸ್ ಸಂಖ್ಯೆಯನ್ನು ಈ ಲಿಂಕ್ ಮೂಲಕ Track My Application ನೀವು ನಿಮ್ಮ ಅಪ್ಲಿಕೇಶನ್ ನ ಸ್ಟೇಟಸ್ ತಿಳಿದುಕೊಳ್ಳಬಹುದು.


ಅಪ್ಲಿಕೇಶನ್ ಲಿಂಕ್ ನಿಧಾನ ಅಥವಾ ಸ್ಪಂದಿಸದೇ ಇದ್ದಾಗ ಏನು ಮಾಡಬೇಕು?

ಖಾತೆ ತೆರೆಯುವ ಪ್ರಕ್ರಿಯೆಯನ್ನು ಪೂರ್ಣಗೊಳಿಸಲು ನಿಮಗೆ ಉತ್ತಮ ನೆಟ್ವರ್ಕ್ ಸಂಪರ್ಕ ಬೇಕಾಗುತ್ತದೆ.


ನನ್ನ ಖಾತೆಗೆ ಅನ್ವಯವಾಗುವ ಮಿತಿಗಳನ್ನು ನಾನು ನಿರ್ವಹಿಸಬಹುದು ಎಂದು ನಾನು ಹೇಗೆ ಖಚಿತಪಡಿಸಿಕೊಳ್ಳುತ್ತೇನೆ?

ಕೆಳಗಿನವುಗಳನ್ನು ಮಾಡುವುದನ್ನು ಖಚಿತಪಡಿಸಿಕೊಳ್ಳಿ:

1.    ಯಾವುದೇ ಸಮಯದಲ್ಲಿ ನಿಮ್ಮ ಖಾತೆಯ ಬ್ಯಾಲನ್ಸ್ 1 ಲಕ್ಷಕ್ಕಿಂತ ಅಧಿಕವಿರಬಾರದು 

2.    ಖಾತೆಗೆ ನಿಮ್ಮ ವಾರ್ಷಿಕ ಕ್ರೆಡಿಟ್ ಆರ್ಥಿಕ ವರ್ಷದೊಳಗೆ 2 ಲಕ್ಷಕ್ಕಿಂತ ಅಧಿಕವಿರಬಾರದು 

ನೆನಪಿಡಿ ನಿಮ್ಮ ಖಾತೆಯು 1 ವರ್ಷದವರೆಗೆ ಮಾನ್ಯವಾಗಿರುತ್ತದೆ 

ನಿಮ್ಮ ಆಯ್ಕೆಯ ಪ್ರಕಾರ ಖಾತೆಯನ್ನು ರೆಗ್ಯುಲರ್ ಸೇವಿಂಗ್ಸ್ ಖಾತೆಗೆ ಪರಿವರ್ತಿಸುವುದಕ್ಕಾಗಿ ನಿಮ್ಮ ಸಂಪೂರ್ಣ KYC ಯನ್ನು ಪೂರ್ಣಗೊಳಿಸಲು ನೀವು ನಿಮ್ಮ HDFC ಬ್ಯಾಂಕ್ ಶಾಖೆಯನ್ನು ಸಹ ಸಂಪರ್ಕಿಸಬಹುದು. ಮೇಲಿನ ಮಿತಿಗಳು ಅನ್ವಯವಾಗುವದಿಲ್ಲ ಮತ್ತು ನೀವು HDFC ಬ್ಯಾಂಕ್  ನ ನಿಯಮಿತ ಉಳಿತಾಯ ಖಾತೆಯ ಲಾಭಗಳನ್ನು ಆನಂದಿಸಬಹುದು. 


ನಾನು ಖಾತೆಯನ್ನು ಸ್ಟ್ಯಾಂಡರ್ಡ್ ಸೇವಿಂಗ್ಸ್ ಖಾತೆಗೆ ಪರಿವರ್ತಿಸಿ ಬಳಸಬಹುದೇ?

ಖಂಡಿತ ಮಾಡಬಹುದು. ಒಂದು ವರ್ಷದಲ್ಲಿ ನೀವು ನಿಮ್ಮ ಹತ್ತಿರದ ಶಾಖೆಯನ್ನು ಸಂಪರ್ಕಿಸಿ ಮತ್ತು ನಾವು ನಿಮಗೆ ಅಗತ್ಯ KYC ಅನ್ನು ಪೂರ್ಣಗೊಳಿಸಲು ಈ ನಿಯಮಿತ ಖಾತೆಯನ್ನು ಸಾಮಾನ್ಯ ಉಳಿತಾಯ ಖಾತೆಯಾಗಿ ಪರಿವರ್ತಿಸಲು ನಿಮಗೆ ಸಹಾಯ ಮಾಡುತ್ತೇವೆ.


ನಾನು ಖಾತೆಯಲ್ಲಿ ನೆಟ್ ಬ್ಯಾಂಕಿಂಗ್ ಅನ್ನು ಹೇಗೆ ಬಳಸಬಹುದು?

ನಿಮ್ಮ ಖಾತೆಯು ನೆಟ್ ಬ್ಯಾಂಕಿಂಗ್ ನಿಂದ ಸಕ್ರಿಯಗೊಂಡಿರುತ್ತದೆ ನೀವು ಅದನ್ನು ಕೇವಲ ಚಲಾಯಿಸಬೇಕು. ಇದನ್ನು ಹೇಗೆ ಮಾಡಬೇಕು ಎಂಬುದರ ಬಗ್ಗೆ ನಿಮಗೆ ಎಸ್ಎಮ್ಎಸ್, ಇ-ಮೇಲ್ ಜೊತೆಗೆ ಸೂಚನೆಗಳನ್ನು ಕಳುಹಿಸಲಾಗುವುದು.

 

ನೆಟ್ ಬ್ಯಾಂಕಿಂಗ್ ಗಾಗಿ ಗ್ರಾಹಕರು ಹೇಗೆ ನೊಂದಾಯಿಸಬಹುದು?

ನೀವು ನೆಟ್ ಬ್ಯಾಂಕಿಂಗ್ ಗೆ ಪ್ರಿ-ರೆಜಿಸ್ಟರ್ ಆಗಿರುತ್ತೀರಿ. ನಿಮ್ಮ ಪಾಸ್ ವರ್ಡ್ ಅನ್ನು ಸೆಟ್ ಮಾಡಬೇಕು. ಸ್ಪ್ಲಿಟ್ OTP (ನೀವು  ಭಾಗಶಃ OTP ಇಮೇಲ್ ಮೂಲಕ ಹಾಗೂ ಭಾಗಶಃ OTP ಮೊಬೈಲ್ ಗೆ ಪಡೆಯುವಿರಿ) ಆಧಾರದ ಮೇಲೆ ನಿಮ್ಮ IPIN ಸೆಟ್ ಮಾಡಲು ನಿಮ್ಮ ಖಾತೆ ಸಂಖ್ಯೆಯನ್ನು ರಚಿಸಿದ ಅನಂತರ ನಿಮಗೆ ಒಂದು ಇಮೇಲ್ ಮೂಲಕ ಲಿಂಕ್  ಕಳುಹಿಸಲಾಗುವುದು.


ಒಂದು ವರ್ಷದೊಳಗೆ ನಾನು ನನ್ನ HDFC ಬ್ಯಾಂಕ್ InstaAccountನ್ನು ಪರಿವರ್ತಿಸದೆ ಇದ್ದರೆ ಏನಾಗುವುದು?

ನಿಮ್ಮ ಖಾತೆಯು ನಿರ್ಬಂಧಿಸಲ್ಪಡುವುದು.


ಖಾತೆಯ ಮೂಲಕ ನಾನು ಯಾವ ಪ್ರಕಾರದ ವಹಿವಾಟುಗಳನ್ನು ನಿರ್ವಹಿಸಬಹುದು?

  • ನೀವು ಬಿಲ್ ಗಳನ್ನು ಪಾವತಿಸಬಹುದು, ರಿಚಾರ್ಜ್ ಹಾಗೂ ಪಾವತಿಗಳನ್ನು ನಿಗದಿಪಡಿಸಬಹುದು 

  • ನೀವು ಖರೀದಿ ಮಾಡಬಹುದು ಹಾಗೂ ಸುರಕ್ಷಿತವಾಗಿ ಆನ್ ಲೈನ್ ನಲ್ಲಿ ಪಾವತಿಸಬಹುದು 

  • ನೀವು ಹಣವನ್ನು ವರ್ಗಾಯಿಸಬಹುದು 


KYC ಯನ್ನು ಪೂರ್ಣಗೊಳಿಸಲು ಮತ್ತು ನನ್ನ ಖಾತೆಯನ್ನು ಪರಿವರ್ತಿಸಲು ನಾನು ಶಾಖೆಗೆ ಭೇಟಿ ನೀಡಬೇಕೆ?

ಹೌದು. ನಿಮ್ಮ ಆಯ್ಕೆಯ ಖಾತೆಯನ್ನು ನಿಯಮಿತ ಉಳಿತಾಯ ಖಾತೆಯನ್ನಾಗಿ ಪರಿವರ್ತಿಸಲು ಪರಿಶೀಲನೆಗಾಗಿ ನೀವು ಅಸಲಿ KYC ದಾಖಲೆಯೊಂದಿಗೆ ಶಾಖೆಗೆ ಭೇಟಿ ನೀಡಬೇಕು.


ಖಾತೆಯನ್ನು ತೆರಯಲು ಶುಲ್ಕ ಎಷ್ಟು ಇದೆ? 

ಈ ಖಾತೆಗೆ ಸಂಬಂಧಿಸಿದಂತೆ ಯಾವ ಶುಲ್ಕಗಳು ಇರುವುದಿಲ್ಲ.


ನನ್ನ ಖಾತೆ ತೆರೆಯುವ ಸಮಯದಲ್ಲಿ ಆಯ್ಕೆ ಮಾಡಿದ ಉಳಿತಾಯ/ವೇತನ ಖಾತೆಯ ಎಲ್ಲಾ ವೈಶೈಷ್ಟ್ಯಗಳು ತೆರೆದ ಖಾತೆಯಲ್ಲಿ ಇರುತ್ತವೆಯೇ? (ಉದಾಹರಣೆಗೆ: ರೆಗ್ಯುಲರ್ ಸೇವಿಂಗ್ಸ್ ಖಾತೆ/ಮಹಿಳೆಯರ ಖಾತೆ/ಹಿರಿಯ ನಾಗರಿಕರ ಖಾತೆ)

ಇಲ್ಲಾ. ಯಾವುದೇ HDFC ಬ್ಯಾಂಕ್ ಶಾಖೆಯಲ್ಲಿ ಸಂಪೂರ್ಣ KYCಯ ವಿಧಿವಿಧಾನಗಳು ಪೂರ್ಣಗೊಂಡ ನಂತರ ನಿಮ್ಮ ಖಾತೆಯಲ್ಲಿ ಈ ವೈಶೈಷ್ಟ್ಯಗಳು ಲಭ್ಯವಿರುತ್ತದೆ.



ನಾನು HDFC ಬ್ಯಾಂಕ್ InstaAccountನ್ನು ಹೊಂದುವ ಗರಿಷ್ಠ ಸಮಯ ಎಷ್ಟಿದೆ?

ನೀವು HDFC ಬ್ಯಾಂಕ್ InstaAccountನ್ನು ಒಂದು ವರ್ಷದವರೆಗೆ ಹೊಂದಬಹುದು. ನೀವು ಈ ಸಮಯದಲ್ಲಿ ಸಂಪೂರ್ಣ KYC ಯನ್ನು ಪೂರ್ಣಗೊಳಿಸಿ ಈ ಖಾತೆಯನ್ನು ನಿಯಮಿತ ಉಳಿತಾಯ ಖಾತೆಗೆ ವರ್ಗಾಯಿಸಬಹುದು. ಇದನ್ನು ಮಾಡಲು ದಯವಿಟ್ಟು ನಿಮ್ಮ ಹತ್ತಿರದ HDFC ಬ್ಯಾಂಕ್ ಶಾಖೆಗೆ ಭೇಟಿ ನೀಡಿ.


ನಾನು ಖಾತೆಗೆ ಹಣ ವರ್ಗಾಯಿಸುವುದು / ನನ್ನ ವೇತನ ಜಮಾ ಆಗುವುದಕ್ಕೆ ಯಾವುದಾದರೂ ದಿನಾಂಕವಿದೆಯೇ?

ಇಲ್ಲಾ. ಖಾತೆಯನ್ನು ಬಳಸಲು ಪ್ರಾರಂಭಿಸಲು ನೀವು ಹಣವನ್ನು ತ್ವರಿತವಾಗಿ ನಿಮ್ಮ ಖಾತೆಗೆ ಡಿಜಿಟಲ್ ಆಗಿ ವರ್ಗಾಯಿಸಬಹುದು, 

(3 ದಿನದೊಳಗೆ)  


ಖಾತೆಯು ಡಿಜಿಟಲ್ ಆಗಿ ತೆರೆಯಲು ನಾನು ಏನನ್ನು ನೀರಿಕ್ಷಿಸಬಹುದು?

ನೀವು ನಿಮ್ಮ  HDFC ಬ್ಯಾಂಕ್ InstaAccount ಹಾಗೂ ಕಸ್ಟಮರ್ ಐಡಿಯನ್ನು ತ್ವರಿತವಾಗಿ ಪಡೆಯಬಹುದು. ಖಾತೆ ತೆರೆಯುವ ಪ್ರಕ್ರಿಯೆ ಸಮಯದಲ್ಲಿ ನಾವು ನಿಮಗೆ ನೆಟ್ ಬ್ಯಾಂಕಿಂಗ್ ಆಕ್ಟಿವೇಶನ್ ಲಿಂಕ್ ಅನ್ನು ಕಳುಹಿಸಿತ್ತೇವೆ. ಖಾತೆಯನ್ನು ತೆರೆಯುವ ಸಮಯದಲ್ಲಿ ನಾವು ನಿಮಗೆ ಮೂರನೆ ವ್ಯಕ್ತಿಗೆ ಹಣವನ್ನು ವರ್ಗಾಯಿಸಲು ನೀವು ಖಚಿತವಾಗಿದ್ದೀರಾ ಎಂದು ಕೇಳುತ್ತೇವೆ. 


ನಾನು ಚೆಕ್ ಬುಕ್ ಮತ್ತು ಡೆಬಿಟ್ ಕಾರ್ಡ್ ಯಾವಾಗ ಪಡೆಯಬಹುದು?

HDFC ಬ್ಯಾಂಕ್ InstaAccount  ಡೆಬಿಟ್ ಕಾರ್ಡ್ ಆಗಲಿ ಅಥವಾ ಚೆಕ್ ಬುಕ್ ಆಗಲಿ ನೀಡುವುದಿಲ್ಲ. ನೀವು ನಿಮ್ಮ ಎಲ್ಲಾ ವಹಿವಾಟುಗಳು ಹಾಗೂ ಹಣ ತೆಗೆದುಕೊಳ್ಳುವುದು ಇವೆಲ್ಲವನ್ನು ಡಿಜಿಟಲ್ ಆಗಿಯೇ ಮಾಡಬಹುದು.


ನನ್ನ HDFC ಬ್ಯಾಂಕ್ InstaAccount ನಿಂದ ನಾನು ಹಣವನ್ನು ಹೇಗೆ ವಿತ್ ಡ್ರಾ ಮಾಡಬಹುದು ಹಾಗೂ ಅದಕ್ಕೆ ಶುಲ್ಕವೇನಾದರೂ ಇದೆಯೇ?

ಯಾವುದೇ HDFC ಬ್ಯಾಂಕ್ ಎಟಿಎಂನಿಂದ ಹಣ ತೆಗೆದುಕೊಳ್ಳಲು ನೀವು ನಿಮ್ಮ ಮೊಂಬೈಲ್ ಫೋನ್ ಅನ್ನು ಬಳಸಬಹುದು. ಕೇವಲ ಕಾರ್ಡ್ ಲೆಸ್ ಕ್ಯಾಶ್ ವಿಥ್ ಡ್ರಾಯಲ್ ಆಯ್ಕೆಯನ್ನು ಒತ್ತಿ ಮತ್ತು ಸೂಚನೆಗಳನ್ನು ಅನುಸರಿಸಿ. ಇದಕ್ಕೆ ಯಾವ ರೀತಿಯ ಶುಲ್ಕಗಳಿರುವದಿಲ್ಲ. 


ಅಪ್ಲಿಕೇಶನ್ ಪ್ರಕ್ರಿಯೆಯ ಸಮಯದಲ್ಲಿ ಸಂಪರ್ಕ ಕಡಿತಗೊಂಡಾಗ ನಾನು ಎಲ್ಲಿಗೆ ನಿಲ್ಲಿಸಿದ್ದೆನು ಅಲ್ಲಿಂದ ಮುಂದುವರೆಸಬಹುದೇ

ಹೌದು. ನೀವು ಎಲ್ಲಿಗೆ ನಿಲ್ಲಿಸಿದ್ದಿರಿ ಅಲ್ಲಿಂದ ಮುಂದುವರೆಸಬಹುದು.


ನಾನು ನನ್ನ ಖಾತೆಯನ್ನು ಸಂಪೂರ್ಣ KYC ಖಾತೆಯನ್ನಾಗಿ ಹೇಗೆ ಪರಿವರ್ತಿಸಬಹುದು?

ನಿಮಗೆ ಹತ್ತಿರದ ಶಾಖೆಯಲ್ಲಿ ನಿಮ್ಮ ಸಂಪೂರ್ಣ KYC ಅನ್ನು ಪೂರ್ಣಗೊಳ್ಳಿಸಲು ಭೇಟಿ ನೀಡಬೇಕು, ತದನಂತರ ನಿಮ್ಮ ಖಾತೆಯನ್ನು ನಿಮ್ಮ ಆಯ್ಕೆಯ ಪ್ರಕಾರ ಯಾವುದೇ ರೆಗ್ಯುಲರ್ ಸೇವಿಂಗ್ಸ್ ಖಾತೆಗೆ ಪರಿವರ್ತಿಸಬಹುದು.


ನಾನು InstaAccount ನಲ್ಲಿ ನನ್ನ ಇಮೇಲ್ ಅನ್ನು ನವೀಕರಿಸಬಹುದೇ / ಬದಲಾಯಿಸಬಹುದೇ?

ಇಲ್ಲಾ. ಹತ್ತಿರದ ಯಾವುದೇ ಶಾಖೆಯಲ್ಲಿ ನಿಮ್ಮ ಸಂಪೂರ್ಣ KYC ಅನ್ನು ಪೂರ್ಣಗೊಳಿಸಿದ ನಂತರವೇ ನಿಮ್ಮ InstaAccount ನಲ್ಲಿ ಇಮೇಲ್ ಐಡಿ ಅನ್ನು ಬದಲಾಯಿಸಬಹುದು.

Eligibility

Fees & Charges