Features
Eligibility
Fees & Charges
ಡಿಜಿಸೇವ್ ಯೂಥ್ ಅಕೌಂಟ್ ಶುಲ್ಕಗಳು ಮತ್ತು ವೆಚ್ಚಗಳು
ನಿಮಗೆ ತಿಳಿದಿರಬೇಕಾದದ್ದು
ಸೂಚನೆ :
ಪ್ರಸ್ತುತ ತಿಂಗಳ ಸೇವೆ/ ವಹಿವಾಟಿನ ಶುಲ್ಕಗಳು, ಖಾತೆಯಲ್ಲಿ ಕಳೆದ ತಿಂಗಳು ನಿರ್ವಹಿಸಿದ ಎ ಎಂ ಬಿ ಯ ಆಧಾರದ ಮೇಲೆ ಅನ್ವಯಿಸುತ್ತದೆ.
ಎ ಎಂ ಬಿಯನ್ನು(ಮೇಲೆ ತಿಳಿಸಿದಂತೆ) ನಿರ್ವಹಿಸದಿರುವ ಆಧಾರದ ಮೇಲೆ, ಸೇವೆ/ ವಹಿವಾಟಿನ ಶುಲ್ಕಗಳು, ಆದ್ಯತೆಯಿರುವ, ಕಾರ್ಪೊರೇಟ್ ಸಂಬಳ ಮತ್ತು ಸೂಪರ್ ಸೇವರ್ ಗ್ರಾಹಕರಿಗೆ ಅನ್ವಯವಾಗುವುದಿಲ್ಲ.
ಎಲ್ಲಾ ಶುಲ್ಕಗಳು ಮತ್ತು ವೆಚ್ಚಗಳು ತೆರಿಗೆಯಿಂದ ಪ್ರತ್ಯೇಕವಾಗಿದೆ. ಪಟ್ಟಿಯಲ್ಲಿ ತೋರಿಸಿದಂತೆ ಶುಲ್ಕಗಳು ಸರಕು ಮತ್ತು ಸೇವಾ ತೆರಿಗೆಗಳನ್ನು ಅನ್ವಯವಾಗುವಂತೆ ಆಕರ್ಷಿಸುತ್ತದೆ.
HDFC ಬ್ಯಾಂಕ್ ಡಿಜಿಸೇವ್ ಯೂಥ್ ಸೇವಿಂಗ್ಸ್ ಅಕೌಂಟ್ / ಉಳಿತಾಯ ಖಾತೆಯ ದರಗಳು ಮತ್ತು ಶುಲ್ಕಗಳು ಕೆಳಗಿನಂತಿವೆ:
ಶುಲ್ಕಗಳ ವಿವರ | ಡಿಜಿಸೇವ್ ಯೂಥ್ ಸೇವಿಂಗ್ಸ್ ಅಕೌಂಟ್ / ಉಳಿತಾಯ ಖಾತೆ |
ಕನಿಷ್ಟ ಸರಾಸರಿ ಬಾಕಿ ಅವಶ್ಯಕತೆ | ಮೆಟ್ರೋ / ನಗರ ಶಾಖೆಗಳು : ಎ ಎಂ ಬಿ ರೂ.5,000/-, ಅರೆ- ನಗರ / ಗ್ರಾಮೀಣ ಶಾಖೆಗಳು : ಎ ಎಂ ಬಿ ರೂ.2,500/- |
ನಿರ್ವಹಣೆ ರಹಿತ ಶುಲ್ಕಗಳ ಬಾಕಿ *
ಎ ಎಂ ಬಿ – ಸರಾಸರಿ ಮಾಸಿಕ ಬಾಕಿ ಕನಿಷ್ಟ ಬಾಕಿಯನ್ನು ನಿರ್ವಹಿಸದಿರುವ ಸಮಯದಲ್ಲಿ, ಬ್ಯಾಂಕ್ ಎಸ್ ಎಂ ಎಸ್ / ಈಮೇಲ್/ ಪತ್ರ ಇತರೆ, ಮುಖಾಂತರ ಗ್ರಾಹಕರಿಗೆ ವಿಷಯ ತಿಳಿಸುತ್ತದೆ. ಒಂದು ಪಕ್ಷ ಆ ತಿಂಗಳಲ್ಲಿ ಕನಿಷ್ಟ ಬಾಕಿಯನ್ನು ಮರು ನಿರ್ವಹಿಸದಿದ್ದಲ್ಲಿ ಕನಿಷ್ಟ ಬಾಕಿಯನ್ನು ನಿರ್ವಹಿಸದಿರುವುದು, ಕನಿಷ್ಟ ಬಾಕಿಯನ್ನು ಮರು ನಿರ್ವಹಿಸುವವರೆಗೂ ಶುಲ್ಕಗಳನ್ನು ವಿಧಿಸಲಾಗುತ್ತದೆ. ಕನಿಷ್ಟ ಬಾಕಿಯನ್ನು ನಿರ್ವಹಿಸದಿದ್ದಲ್ಲಿ, ಬ್ಯಾಂಕ್ ಮೊದಲ ತಿಂಗಳಲ್ಲೇ ಗ್ರಾಹಕರಿಗೆ ಸೂಚನೆ ನೀಡುತ್ತದೆ ಮತ್ತು ಮುಂದಿನ ತಿಂಗಳುಗಳಲ್ಲಿ ಕನಿಷ್ಟ ಬಾಕಿಯನ್ನು ನಿರ್ವಹಿಸದಿದ್ದಲ್ಲಿ ಪುನಃ ಸೂಚನೆಯನ್ನು ನೀಡುವುದಿಲ್ಲ. ಎಲ್ಲಾ ಸಮಯದಲ್ಲೂ ಮಾನ್ಯ ಈಮೇಲ್ ಐಡ್, ಮೊಬೈಲ್ ನಂಬರ್ ಮತ್ತು ವಿಳಾಸವು ಬ್ಯಾಂಕಿನಲ್ಲಿ ಅಪ್ಡೇಟ್ ಆಗಿರುವಂತೆ ಖಾತ್ರಿಪಡಿಸುವುದು ಗ್ರಾಹಕನ ಜವಾಬ್ದಾರಿಯಾಗಿರುತ್ತದೆ, ಇಲ್ಲವಾದಲ್ಲಿ, ಗ್ರಾಹಕನಿಗೆ ಸೂಚನೆ(ಗಳು) ಸಿಗದೆ ಇರಬಹುದು. ಶಾಖೆಯ ಮುಖಾಂತರ ಡಿಡಿ / ಎಂ ಸಿ ವಿತರಣಾ ಶುಲ್ಕಗಳು
ನೆಟ್-ಬ್ಯಾಂಕಿಂಗ್ ಮುಖಾಂತರ ಡಿಡಿ ಮನವಿ
*ಥರ್ಡ್ ಪಾರ್ಟಿಯ ನೊಂದಣಿ ಅಗತ್ಯವಿದೆ ( ಥರ್ಡ್ ಪಾರ್ಟಿಯ ವರ್ಗಾವಣೆಗೆ ನೊಂದಾಯಿಸಿರುವ ಗ್ರಾಹಕರ ಪ್ರತೀ ಗ್ರಾಹಕ ಐಡಿಗೆ 10 ಲಕ್ಷದ ವರೆಗೂ ಗರಿಷ್ಟ ಮಟ್ಟವಿದೆ ಮತ್ತು ಹಾಗಾಗಿ 1 ಲಕ್ಷದಿಂದ 10 ಲಕ್ಷದವರೆಗೂ ಬಹು ಡಿಡಿಗಳನ್ನು ನೀಡಬಹುದು ಮತ್ತು ಫಲಾನುಭವಿಯ ವಿಳಾಸಕ್ಕೆ ಕಳುಹಿಸಬಹುದು)
|
ನಗದು ವಹಿವಾಟುಗಳ ಮೌಲ್ಯ (ಸ್ವಯಂ / ಥರ್ಡ್ ಪಾರ್ಟಿಯಿಂದ ಠೇವಣಿ ಮತ್ತು ವಿತ್ಡ್ರಾಯಲ್ ಒಟ್ಟು ಮೊತ್ತ) – ಯಾವುದೇ ಶಾಖೆ | ರೂ 1.25 ಲಕ್ಷ --- ತಿಂಗಳಿಗೆ ಪ್ರತೀ ಅಕೌಂಟಿಗು ಉಚಿತ (ಯಾವುದೇ ಶಾಖೆಗಳಲ್ಲಿ) 1.25 ಲಕ್ಷ ಕ್ಕೂ ಮೇಲಿನ ಉಚಿತ ಮಿತಿ---ಪ್ರತೀ ಸಾವಿರಕ್ಕೆ ರೂ.5/- ಅಥವಾ or ಅದರ ಭಾಗ, ರೂ.150/- ಗಳ ಕನಿಷ್ಟಕ್ಕೆ ಒಳಪಟ್ಟಿರುತ್ತದೆ. ಥರ್ಡ್ ಪಾರ್ಟಿಯ ನಗದು ವಹಿವಾಟುಗಳು – ಅನುಮತಿಸಲಾದ ದಿನದ ಗರಿಷ್ಟ ಮಿತಿ ಯು ರೂ. 25,000 |
ನಗದು ನಿರ್ವಹಣಾ ಶುಲ್ಕಗಳು | ಮಾರ್ಚ್ 01, 2017 ರಿಂದ ವಿತ್ಡ್ರಾ ಮಾಡಲಾಗಿದೆ |
ಫೋನ್ ಬ್ಯಾಂಕಿಂಗ್ – ಐ ವಿ ಆರ್ ರಹಿತ | ಉಚಿತ |
ಎಟಿಎಂ ಕಾರ್ಡ್ | ಉಚಿತ |
ಎಟಿಎಂ ಕಾರ್ಡ್ - ಬದಲಿ ಶುಲ್ಕಗಳು | ರೂ. 200 (1ನೇ ಡಿಸೆಂಬರ್ '14 ರಿಂದ ಚಾಲ್ತಿ ) |
ಡೆಬಿಟ್ ಕಾರ್ಡ್ ಶುಲ್ಕಗಳು
ಅನ್ವಯವಾಗುವಂತೆ ಎಲ್ಲಾ ಶುಲ್ಕಗಳು ತೆರಿಗೆಗೆ ಒಳಪಡುತ್ತವೆ.
ಡೆಬಿಟ್ ಕಾರ್ಡ್ ವಿಧ | ವಿತರಣಾ ಶುಲ್ಕ | ವಾರ್ಷಿಕ / ನವೀಕರಣ ಶುಲ್ಕ | ಬದಲಿ ಶುಲ್ಕಗಳು |
ಸಾಮಾನ್ಯ ಕಾರ್ಡ್ | ಉಚಿತ | ರೂ. 150 | ಡೆಬಿಟ್ ಕಾರ್ಡ್ಗಳಿಗೆ ಬದಲಿ / ಮರು ವಿತರಣೆ ಶುಲ್ಕಗಳು - ರೂ. 200 + ಅನ್ವಯಿಸುವ ತೆರಿಗೆಗಳು (1ನೇ ಡಿಸೆಂಬರ್ '16 ರಿಂದ ಚಾಲ್ತಿ ) |
ರೂಪೇ ಪ್ರೀಮಿಯಂ | ಉಚಿತ | ರೂ. 200 (1ನೇ ಮಾರ್ಚ್ '18 ರಿಂದ ಚಾಲ್ತಿ) | |
ಈಸೀ ಶಾಪ್ ವಿಮೆನ್ಸ್ ಅಡ್ವಾನ್ಟೇಜ್ | ಉಚಿತ | ರೂ. 200 (1ನೇ ಮಾರ್ಚ್ '18 ರಿಂದ ಚಾಲ್ತಿ) | |
ಈಸೀ ಶಾಪ್ ಟೈಟಾನಿಯಂ | ಉಚಿತ | ರೂ. 250 | |
ಈಸೀ ಶಾಪ್ ಟೈಟಾನಿಯಂ ರಾಯಲ್ | ಉಚಿತ | ರೂ. 400 | |
ರಿವಾರ್ಡ್ಸ್ ಕಾರ್ಡ್ | ಉಚಿತ | ರೂ. 500 | |
ಟೈಮ್ಸ್ ಪಾಯಿಂಟ್ ಡೆಬಿಟ್ ಕಾರ್ಡ್ | ಉಚಿತ | ರೂ. 650 | |
ಈಸೀ ಶಾಪ್ ಪ್ಲಾಟಿನಂ | ರೂ. 750 | ರೂ. 750 |
ಎಟಿಎಂ / ಡೆಬಿಟ್ ಕಾರ್ಡ್ ಕಾರ್ಡ್ - ವಹಿವಾಟು ಶುಲ್ಕ (1ನೇ ಸೆಪ್ಟೆಂಬರ್ '19 ಚಾಲ್ತಿ)
HDFC ಬ್ಯಾಂಕ್ ಎಟಿಎಂ-ಗಳು | ಇತರ ಬ್ಯಾಂಕ್ ಎಟಿಎಂ-ಗಳು |
ಹಣಕಾಸಿನ ವಹಿವಾಟುಗಳು – ಎಲ್ಲಾ ನಗರಗಳಲ್ಲಿ ತಿಂಗಳಿಗೆ ಮೊದಲ 5 ವಹಿವಾಟುಗಳು ಉಚಿತ | (a) ಅಗ್ರ ಸ್ಥಾನದಲ್ಲಿರುವ (ಟಾಪ್) 6 ನಗರಗಳಲ್ಲಿ ** : ತಿಂಗಳಿಗೆ ಮೊದಲ 3 ವಹಿವಾಟುಗಳು ಉಚಿತ (ಹಣಕಾಸಿನ + ಹಣಕಾಸಿನೇತರ) |
ಹಣಕಾಸಿನೇತರ ವಹಿವಾಟುಗಳು - ಯಾವುದೇ ಶುಲ್ಕವಿಲ್ಲ. | (b) ಅಗ್ರ ಸ್ಥಾನದಲ್ಲಿಲ್ಲದ (ನಾನ್ –ಟಾಪ್) 6 ನಗರಗಳು : ತಿಂಗಳಿಗೆ ಮೊದಲ 5 ವಹಿವಾಟುಗಳು ಉಚಿತ (ಹಣಕಾಸಿನ + ಹಣಕಾಸಿನೇತರ) |
** ಅಗ್ರ ಸ್ಥಾನದಲ್ಲಿರುವ (ಟಾಪ್) 6 ನಗರಗಳು - ಮುಂಬೈ, ನವ ದೆಹಲಿ, ಚೆನೈ, ಕೊಲ್ಕತ್ತಾ, ಬೆಂಗಳೂರು ಮತ್ತು ಹೈದರಾಬಾದಿನ ಎಟಿಎಂಗಳಲ್ಲಿ ನಡೆದ ವಹಿವಾಟುಗಳಿಗೆ
ಉಚಿತ ಲಿಮಿಟ್ ಗಿಂತ ಹೆಚ್ಚು ಅಥವಾ ಮೇಲಿನ ವಹಿವಾಟಿಗಳಿಗೆ ಶುಲ್ಕಗಳನ್ನು ಕೆಳಗಿನಂತೆ ವಿಧಿಸಲಾಗುತ್ತದೆ :
ನಗದು / ಕ್ಯಾಶ್ ವಿತ್ಡ್ರಾಯಲ್ - ಪ್ರತೀ ವಹಿವಾಟಿಗೆ ರೂ. 20 + ತೆರಿಗೆಗಳು
ಹಣಕಾಸೇತರ ವಹಿವಾಟು – HDFC ಬ್ಯಾಂಕ್ ಅಲ್ಲದೆ ಇತರೆ ಎಟಿಎಂ ಗಳಲ್ಲಿ ಪ್ರತೀ ವಹಿವಾಟಿಕೆ ರೂ 8.5 + ತೆರಿಗೆಗಳು
ಇನ್ಸ್ಟಾ ಪೇ | ಪ್ರತೀ ವಹಿವಾಟಿಗೆ ರೂ. 10 |
ಇನ್ಸ್ಟಾ ಅಲರ್ಟ್ | ಪ್ರತೀ ತ್ರೈ ಮಾಸಿಕಕ್ಕೆ ರೂ.15, 1ನೇ ಏಪ್ರಿಲ್ 2013ರ ರಿಂದ ಚಾಲ್ತಿಯಾಗಿದ್ದು ಗ್ರಾಹಕರು ಕೇವಲ ಈಮೇಲ್ ನನ್ನು ಅವರ ವಿತರಣಾ ಚಾನೆಲ್ ಆಗಿ ಆಯ್ಕೆ ಮಾಡಿದ್ದಲ್ಲಿ, ಅವರಿಗೆ ಇಸ್ಟಾ ಅಲರ್ಟ್ ಬರಲು ಶುಲ್ಕಗಳು ಅನ್ವಯಿಸುವುದಿಲ್ಲ. |
ಇಸಿಎಸ್ / ಎಸಿಎಚ್ (ಡೆಬಿಟ್) ರಿಟರ್ನ್ ಶುಲ್ಕಗಳು | ಪ್ರತಿ ಸೂಚನೆಗೆ ರೂ 500/- + ತೆರಿಗೆಗಳು |
ಇತರ ಶುಲ್ಕಗಳು ಮತ್ತು ವೆಚ್ಚಗಳಿಗೆ. ದಯವಿಟ್ಟು Click here. ಇಲ್ಲಿ ಕ್ಲಿಕ್ ಮಾಡಿ.